
ನವದೆಹಲಿ, ಯುಪಿ ಸೇರಿದಂತೆ ಹಲವು ಕಡೆ ಭೂಕಂಪ: ಭಯಭೀತರಾಗಿ ಮನೆಗಳಿಂದ ಹೊರ ಓಡಿ ಬಂದ ಜನ
Tuesday, March 21, 2023
ನವದೆಹಲಿ: ದೇಶದ ರಾಜಧಾನಿ ನವದೆಹಲಿ ಹಾಗೂ ಅದರ ಸುತ್ತಮುತ್ತ ನಗರಗಳಲ್ಲಿ ಮಂಗಳವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವಾರು ಸೆಕೆಂಡುಗಳ ವರೆಗೆ ಭೂಮಿ ಬಲವಾಗಿ ಕಂಪಿಸಿದೆ.
ಮಂಗಳವಾರ ಸಂಜೆ ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿತ್ತು. ಅದಾದ ನಂತರ ರಾತ್ರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಭಯಭೀತರಾದ ಜನ ತಮ್ಮ ಮನೆಗಳಿಂದ ಹೊರಗೋಡಿ ಬರುತ್ತಿರುವ ದೃಶ್ಯಗಳುಳ್ಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿಯೂ ಭೂಮಿ ಕಂಪನಿಸಿದೆ. ಉತ್ತರ ಪ್ರದೇಶದ ಗಾಜಿಯಾಬಾದ್, ವಸುಂಧರಾ ಸೇರಿದಂತೆ ಹಲವು ನಗರಗಳಲ್ಲಿ ಭೂಮಿ ಕಂಪಿಸಿದೆ. ಇದರಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ.