'ಕಣಚೂರು' ನಾಗರಿಕ ಸನ್ಮಾನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ  ಪ್ರಸಾದ್ ರೈ ಕಲ್ಲಿಮಾರ್

'ಕಣಚೂರು' ನಾಗರಿಕ ಸನ್ಮಾನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಪ್ರಸಾದ್ ರೈ ಕಲ್ಲಿಮಾರ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಾಜಿ ಯು.ಕೆ. ಮೋನು ಕಣಚೂರು ಇವರಿಗೆ ಹುಟ್ಟೂರ ನಾಗರಿಕ ಸನ್ಮಾನ ಮತ್ತು ಸೌಹಾರ್ದ ಇಫ್ತಾರ್ ಕೂಟವು  ಇದೇ ಮಾರ್ಚ್ 26 ರವಿವಾರ ಸಂಜೆ 4 ಗಂಟೆಗೆ  ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ನಡೆಯಲಿದೆ. ಸೌಹಾರ್ದ ಇಫ್ತಾರ್ ಕೂಟವನ್ನು ದೇರಳಕಟ್ಟೆ ಬಿಬಿಸಿ ಹಾಲ್ ನಲ್ಲಿ ಆಯೋಜಿಸಲಾಗುತ್ತದೆ.  ಈ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಇಂದಿಲ್ಲಿ ಹಿರಿಯ ಸಾಮಾಜಿಕ ಧುರೀಣ ಪ್ರಸಾದ್ ರೈ ಕಲ್ಲಿಮಾರ್  ಬಿಡುಗಡೆಗೊಳಿಸಿದರು. 

ಸಂಚಾಲಕರಾದ ಹೈದರ್ ಪರ್ತಿಪಾಡಿ ಮತ್ತು  ಅಧ್ಯಕ್ಷರಾದ ಕಲ್ಲೀಮಾರ್ ರವೀಂದ್ರ ರೈ ಕಾರ್ಯಕ್ರಮದ ರೂಪುರೇಷೆಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಲಯನ್ ಚಂದ್ರಹಾಸ ಶೆಟ್ಟಿ ರವರು ಮಾತನಾಡುತ್ತಾ ಕಣಚೂರು ಮೋನು ಹಾಜಿಯವರು ನಮ್ಮ ನಾಡಿನ ಒಂದು ಶಕ್ತಿಯಾಗಿದ್ದಾರೆ, ಸತತ ಸಾಧನೆಯಿಂದ ಮೇಲೆ ಬಂದವರು, ಇಂತಹ ಧೀಮಂತ ವ್ಯಕ್ತಿ ನಾಡಿನಲ್ಲಿ ನೇತೃಸ್ಥಾನದಲ್ಲಿರುವುದು ಸಾಮರಸ್ಯದ ಬಾಳ್ವೆಗೆ ಅಗತ್ಯವಾಗಿದೆ ಎಂದರು. 

ಇವರಂತಹ ಜಾತ್ಯಾತೀತ ಮನಸ್ಥಿತಿಯ ನಾಯಕರು  ಈ ದೇಶದ ಸಹಬಾಳ್ವೆಯ ಪರಂಪರೆಯನ್ನು ಉಳಿಸಲು  ಅಗತ್ಯ ಎಂದ ಅವರು ಕಣಚೂರು ಮೋನು ಹಾಜಿಯವರ ಸಾಧನೆ ಮತ್ತು ವ್ಯಕ್ತಿತ್ವವನ್ನು ಪ್ರಶಂಸಿಸಿದರು. ಒಂದು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆಯುವುದು ಸುಲಭದ ವಿಷಯವಲ್ಲ. ಅದಕ್ಕೆ ತಕ್ಕುದಾದ ಸಾಧನೆ ಬೇಕು. ಮೋನು ಹಾಜಿಯವರ   ಅದ್ಭುತ ಸಾಧನೆಗೆ ಸಂದ ಅರ್ಹ ಪುರಸ್ಕಾರವಿದು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಲ್ವಿನ್ ಡಿ' ಸೋಝಾ,  ಬೆಳ್ಮ ಪಂಚಾಯತ್ ಅಧ್ಯಕ್ಷ ಸಿ.ಎಮ್. ಸತ್ತಾರ್, ಮಾಜಿ ಅಧ್ಯಕ್ಷರಾದ ಹಾಜಿ ಯೂಸುಫ್ ಬಾವ ಹಾಗೂ ಉಸ್ಮಾನ್ ಅಕ್ಸಾ, ಕೊಣಾಜೆ ಪಂಚಾಯತ್ ಮಾಜಿ ಅಧ್ಯಕ್ಷರಾದ ನಝರ್ ಷಾ ಮುಂತಾದವರು ಶುಭ ಹಾರೈಸಿದರು. ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ  ಡಿ.ಐ. ಅಬೂಬಕರ್ ಕೈರಂಗಳ ಸ್ವಾಗತಿಸಿದರು. ತ್ಯಾಗಂ ಹರೇಕಲ ಪ್ರಾಸ್ತಾವಿಕ ಭಾಷಣ ಮಾಡಿದರು. ನಾಸಿರ್  ಸಾಮಣಿಗೆ ವಂದಿಸಿದರು.

Ads on article

Advertise in articles 1

advertising articles 2

Advertise under the article