ಅಮೆರಿಕಾದಲ್ಲಿ ವಿಮಾನ ಅಪಘಾತಕ್ಕೆ ಭಾರತ ಮೂಲದ ಮಹಿಳೆ ಸಾವು; ಮಗಳ ಸ್ಥಿತಿ ಗಂಭೀರ
Tuesday, March 7, 2023
ನ್ಯೂಯಾರ್ಕ್: ವಿಮಾನ ಪ್ರದರ್ಶನದ ಹಾರಾಟದ ವೇಳೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಭಾರತ ಮೂಲದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪುತ್ರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದಲ್ಲಿ ಸಂಭವಿಸಿದೆ.
ವಿಮಾನ ಅಪಘಾತದಲ್ಲಿ ಭಾರತ ಮೂಲದ ರೋಮಾ ಗುಪ್ತಾ (63 ವರ್ಷ) ಮೃತಪಟ್ಟಿದ್ದು, ಆಕೆಯ ಪುತ್ರಿ ರಿವಾ ಗುಪ್ತಾ(33 ವರ್ಷ) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರವಿವಾರ ಲಾಂಗ್ ಐಲ್ಯಾಂಡ್‌ನ ರಿಪಬ್ಲಿಕ್ ಏರ್‌ಪೋರ್ಟ್‌ಗೆ ವಾಪಸಾಗುತ್ತಿದ್ದಾಗ 4 ಸೀಟರ್ ( ಆಸನಗಳ) ಸಿಂಗಲ್ ಎಂಜಿನ್ ಪೈಪರ್ ಚೆರೋಕೀ ವಿಮಾನವು ಬೆಂಕಿಗೆ ಆಹುತಿಯಾಗಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕಾದ ಲಿಂಡೆನ್‌ಹರ್ಸ್ಟ್‌ನ ವಸತಿ ಪ್ರದೇಶದ ಮೈದಾನದಲ್ಲಿ ವಿಮಾನ ಪತನಗೊಂಡಿದ್ದು, ಈ ಅಪಘಾತವನ್ನು ತಡೆಯಲು ಪೈಲಟ್ ತನ್ನ ಕೈಲಾದಷ್ಟು ಪ್ರಯತ್ನಿಸಿದ್ದ ಎಂದು ಹೇಳಲಾಗಿದೆ.