ಗಂಗೊಳ್ಳಿ: ಹಕ್ಲಾಡಿ ಗ್ರಾಮದ ಕಟ್ಟಿನಮಕ್ಕಿನ ರೈಲ್ವೇ ಹಳಿಯ ಪಕ್ಕದ ಪೊದೆಯಲ್ಲಿ ಅಪರಿಚಿತ ಯುವಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ನಡೆದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗಂಗೊಳ್ಳಿ ಪೊಲೀಸರು ಶವವನ್ನು ಗಂಗೊಳ್ಳಿ 24x7 ಆಂಬ್ಯುಲೆನ್ಸ್ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.