ಹೆಮ್ಮೆಯ ದುಬೈ ಕನ್ನಡ ಸಂಘಕ್ಕೆ 8ನೇ ವಸಂತದ ಸಂಭ್ರಮ
Friday, March 31, 2023
ಅಬುಧಾಬಿ: ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ವಿವಿಧ ರೀತಿಯ ಕನ್ನಡಪರ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಸಪ್ತ ಸಾಗರದಾಚೆ ಅರಬರ ಮರಳು ಭೂಮಿ ಮಾಯಾನಗರಿ ದುಬೈಯಲ್ಲಿ ಪಸರಿಸಿ ಬೆಳೆಸುತ್ತಿರುವ ಹೆಮ್ಮೆಯ ದುಬೈ ಕನ್ನಡ ಸಂಘ, ಯುಎಇ ಇದರ 8ನೇ ವಾರ್ಷಿಕೋತ್ಸವವು ಮಾರ್ಚ್ 19 ಭಾನುವಾರದಂದು ಯುನಿಕ್ ವರ್ಲ್ಡ್ ಎಜುಕೇಶನ್ ಬೋರ್ಡ್ ರೂಮಿನಲ್ಲಿ ನಡೆಯಿತು.
ವಾರ್ಷಿಕೋತ್ಸವವವನ್ನು ಹೆಮ್ಮೆಯ ದುಬೈ ಕನ್ನಡ ಸಂಘದ ಸಮಿತಿ ಸದಸ್ಯರು ಕುಟುಂಬಸ್ಥರೊಂದಿಗೆ ಸೇರಿ ಪುಟಾಣಿಗಳು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ಇದೇ ಸಂದರ್ಭದಲ್ಲಿ ಹೆಮ್ಮೆಯ ಕನ್ನಡ ತಂಡದ ಕಳೆದ 7 ವರ್ಷಗಳ ಕಾರ್ಯ ಚಟುವಟಿಕೆಗಳ ಬಗ್ಗೆ ವಿಷ್ಣುಮೂರ್ತಿ ಮೈಸೂರು ಅವರು ವಿವರಿಸಿದರೆ ಮುಂದಿನ ದಿನಗಳಲ್ಲಿ ತಂಡವು ಕೈಗೊಳ್ಳಲಿರುವ ಚಟುವಟಿಕೆಗಳ ಬಗ್ಗೆ ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು ಅವರು ವಿವರಿಸಿದರು. ಸಂಘದ ಸಲಹಾ ಸಮಿತಿ ಸದಸ್ಯರುಗಳಾದ ರಾಘವೇಂದ್ರ ಬೆಂಗಳೂರು, ವಕೀಲರಾದ ಖಲೀಲ್ ಕಾಸರಗೋಡು ಕನ್ನಡಿಗ ಮತ್ತು ತೌಸೀಫ್ ಹುಬ್ಬಳ್ಳಿ ಅವರು ಉಪಸ್ಥಿತರಿದ್ದರು.