ಹೇ..ಗುಬ್ಬಚ್ಚಿಯೇ ಎಲ್ಲಿ ಹೋದೆ ನೀ....
Friday, March 24, 2023
ಗುಬ್ಬಚ್ಚಿ
ಹೇ..ಗುಬ್ಬಚ್ಚಿಯೇ ಎಲ್ಲಿ ಹೋದೆ ನೀ....
ಅಂಗಳದ ಮೂಲೆಯಲ್ಲೂ ಇಲ್ಲ
ಗಿಡದ ಕೊಂಬೆಯಲ್ಲೂ ಇಲ್ಲ
ಬಟ್ಟೆ ಒಣಗಿಸುವ ಟಂಗೀಸಿನ
ಹಗ್ಗದಲ್ಲೂ ಇಲ್ಲ..ಎತ್ತ ಹೋಗಿದ್ದಿಯೇ..ನೀನು
ಎತ್ತ ಸಾಗಿದ್ದಿಯೇ..
ಅಕ್ಕಿ ಶುಚಿಗೊಳಿಸುವಾಗ
ಪಕ್ಕಪಕ್ಕನೇ ಬಂದು
ಮೊರದಲ್ಲಿಯೇ ಕುಳಿತು
ಅಕ್ಕಿ ತಿನ್ನುತ್ತಿದ್ದೆಯಲ್ಲೆ
ಅಂಗೈ ಮೇಲೆ ಕುಳಿತು ಪಿಳಿಪಿಳಿ
ನೋಡುತ್ತಾ..ಲಲ್ಲೆಗೈಯ್ಯುತ್ತಿದ್ದು
ಬೆಕ್ಕ ಕಂಡಾಗ ಪುರ್ರನೆ ಓಡುತ್ತಿದ್ದಿಯಲ್ಲೇ....
ಈಗ ಯಾವ ಬೆಕ್ಕು ಓಡಿಸಿದೆ ನಿನ್ನ
ನೀನಿಲ್ಲ ನಿನ್ನ ಗೂಡಿಲ್ಲ..ಎಲ್ಲಾ ಬಣಬಣ..ಇಂದು ನಿನ್ನ ದಿನವಂತೆ
ಬಾರೆಲೆ ಇಂದಾದರೂ..ಹೇ ಗುಬ್ಬಚ್ಚಿಯೇ..
ಉಷಾ.ಎಂ