ಕೊಡಂಗಾಯಿ ಅಲ್-ಅಮೀನ್ ಯೂತ್ ಫೆಡರೇಶನ್(AYF) ಸಂಘಟನೆಯ "ರಜತ ಸಂಭ್ರಮ"ದ ಲಾಂಛನ ಅನಾವರಣ
ವಿಟ್ಲ(Headlines Kannada):- ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಯನ್ನು ಕೇಂದ್ರವಾಗಿರಿಸಿಕೊಂಡು ಸಾಮಾಜಿಕ,ಧಾರ್ಮಿಕ,ಸಾಂಸ್ಕೃತಿಕ ರಂಗದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಧಾರ್ಮಿಕ ಸೌಹಾರ್ದತೆಯ ಸಂದೇಶ ಸಾರುತ್ತ ಕಳೆದ ಇಪ್ಪತ್ತಮೂರು ವರ್ಷಗಳಿಂದ ಸಮಾಜ ಸೇವೆಯಲ್ಲಿರುವ ನಾಡಿನ ಹೆಮ್ಮೆಯ ಸಂಘಟನೆ ಅಲ್-ಅಮೀನ್ ಯೂತ್ ಫೆಡರೇಶನ್ ರಿ AYF ಕೊಡಂಗಾಯಿ ಇದರ "ರಜತ ಸಂಭ್ರಮ"ದ ಲಾಂಛನ ಅನಾವರಣ ಕಾರ್ಯಕ್ರಮ ಸಂಘಟನೆಯ ಕಛೇರಿಯಲ್ಲಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ನಡೆಯಿತು.
2025'ರಲ್ಲಿ ನಡೆಯುವ ಸಂಘಟನೆಯ 25ನೇ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಆಚರಿಸುವ ಸಂಕಲ್ಪದೊಂದಿಗೆ ಈಗಲೇ ಸಂಘಟನೆ ತಯಾರಿ ನಡೆಸುತ್ತಿದೆ.
2023ನೇ ವರ್ಷದ ಕೊನೆಯಲ್ಲಿ ರಜತ ಸಂಭ್ರಮ ದ ಸ್ವಾಗತ ಸಮಿತಿಯನ್ನು ರೂಪಿಕರಿಸಿ 2024 ರಲ್ಲಿ ವರ್ಷಪೂರ್ತಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 2025ರ ಆರಂಭದಲ್ಲಿ ಸಂಘಟನೆಯ ಬಹು ನಿರೀಕ್ಷಿತ ರಜತ ಸಂಭ್ರಮ ವನ್ನು ಬಹಳ ಸಡಗರದಿಂದ ಆಚರಿಸಲು ಉದ್ದೇಶಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷರಾದ ಸಮದ್ ಸಿ ಹೆಚ್,ಪ್ರ ಕಾರ್ಯದರ್ಶಿ ಶರೀಫ್ ಎಂ, ಕೋಶಾಧಿಕಾರಿ ಮಜೀದ್ ಟಿ ಯಂ, ಕಾರ್ಯದರ್ಶಿ ರಫೀಕ್ ಪಿ, ಫಂಡ್ ಸಂಗ್ರಾಹಕ ಮುಹಮ್ಮದ್ ಯಂ ಕೆ, ಹಾಗೂ ಸದಸ್ಯರಾದ ರಝಾಕ್ ಎಂ ಕೆ, ನಾಸಿರ್ ಕೆ,ಇಲ್ಯಾಸ್ ಕೆ, ಹಸೈನಾರ್ ಟಿ ಯಂ,ಯಹ್ಯಾ ಡಿ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶರೀಫ್ ಯಂ ಸ್ವಾಗತಿಸಿ ರಫೀಕ್ ಪಿ ವಂದಿಸಿದರು.
ವರದಿ:- ಅಬೂ ಅಯಾನ್