ಒಗ್ಗಟ್ಟಿನಿಂದಿರುವ ನಾಯಕರನ್ನು ಬೇರ್ಪಡಿಸಲು ಹುನ್ನಾರ; ಮೊಹಿದೀನ್ ಬಾವ-ಇನಾಯತ್ ಅಲಿ ಹೆಸರಲ್ಲಿ ಸುಳ್ಳು ಸುದ್ದಿ ವೈರಲ್
ಮಹಿಳೆಯೊಂದಿಗೆ ಅಸಭ್ಯ ವರ್ತನೆ ಹೆಸರಲ್ಲಿ ಮತ್ತೊಂದು ಸುಳ್ಳು ಸುದ್ದಿ ಹರಡಿಸಿದ ಕಿಡಿಗೇಡಿಗಳು....
ಮಂಗಳೂರು: ಇದೀಗಾಗಲೇ ಪಕ್ಷದ ಹೈಕಮಾಂಡ್ ಈರ್ವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ನಾವು ಆ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಮೊಹಿದೀನ್ ಬಾವ ಹಾಗೂ ಇನಾಯತ್ ಅಲಿ ಅವರು ಬಹಿರಂಗವಾಗಿ ಹೇಳಿದ್ದಾರೆ ಹಾಗೂ ಇಬ್ಬರೂ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಈ ಇಬ್ಬರ ಒಗ್ಗಟ್ಟನ್ನು ಸಹಿಸದ ಯಾರೋ ಕಿಡಿಗೇಡಿಗಳು 'ಇನಾಯತ್ ಅಲಿ ಬಣ ಹಾಗೂ ಮೊಹಿದೀನ್ ಬಾವ ಬೆಂಬಲಿಗರ ನಡುವೆ ಘರ್ಷಣೆ ಹಾಗೂ ಇಬ್ಬರು ಆಸ್ಪತ್ರೆಗೆ' ಎಂಬ ತಲೆಬರಹದಡಿ ಬರಹವೊಂದನ್ನು ವೈರಲ್ ಮಾಡುತ್ತಿದ್ದಾರೆ.
ಮತ್ತೊಂದು ಕಡೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ನೆಪದಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ ಎಂಬ ತಲೆಬರಹದಡಿ ಸುಳ್ಳು ಸುದ್ದಿ ಹರಡುತ್ತಿದ್ದು. ಈ ಬಗ್ಗೆ ವಾಸ್ತವ ಪರಿಶೀಲಿಸಿದಾಗ ಅಂತಹ ಯಾವುದೇ ಘಟನೆ ಕೈಕಂಬ ಬಂಗ್ಲಗುಡ್ಡೆಯಲ್ಲಿ ನಡೆದೂ ಇಲ್ಲ, ಯಾವೊಬ್ಬನು ಕೂಡ ಆಸ್ಪತ್ರೆಗೂ ದಾಖಲಾಗಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂಬುದು ಸ್ಪಷ್ಟವಾಗಿದೆ.
ಮಾಹಿತಿಯ ಪ್ರಕಾರ ಬಾವ ಮತ್ತು ಇನಾಯತ್ ಅಲಿ ಬೆಂಬಲಿಗರು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.