ಕುವೈಟ್ ಮಣಿಪುರ ಮುಸ್ಲಿಮ್ ಎಸೋಶಿಯೇಷನ್'ನಿಂದ ಬಡ ಕುಟುಂಬಗಳಿಗೆ ರಮದಾನ್ ಕಿಟ್ ವಿತರಣೆ

ಕುವೈಟ್ ಮಣಿಪುರ ಮುಸ್ಲಿಮ್ ಎಸೋಶಿಯೇಷನ್'ನಿಂದ ಬಡ ಕುಟುಂಬಗಳಿಗೆ ರಮದಾನ್ ಕಿಟ್ ವಿತರಣೆ

ಕಟಪಾಡಿ: ಕುವೈಟ್ ಮಣಿಪುರ ಮುಸ್ಲಿಮ್ ಎಸೋಶಿಯೇಷನ್, ಕುವೈಟ್ ಇದರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಅರ್ಹ ಬಡ ಕುಟುಂಬಗಳಿಗೆ  ರಮದಾನ್ ಪ್ರಯುಕ್ತ ಆಹಾರ ಸಾಮಾಗ್ರಿಗಳ  ಕಿಟ್ಟನ್ನು ಸಂಘದ ಗೌರವಾಧ್ಯಕ್ಷ ಸೈಯ್ಯದ್ ಅಹಮದ್ ಮಣಿಪುರ, ಅಧ್ಯಕ್ಷರು ಜಮಾಲ್ ಮಣಿಪುರ, ಉಪಾಧ್ಯಕ್ಷರು ಕರೀಮ್ ಉಚ್ಚಿಲರವರ ನೇತೃತ್ವದಲ್ಲಿ  ಹಾಗೂ ಸಂಘದ ಸರ್ವ ಸದಸ್ಯರುಗಳ ಸಹಕಾರದಿಂದ ರಮಝಾನ್  ಕಿಟ್ಟಿನ ವ್ಯವಸ್ಥೆ ಮಾಡಲಾಯಿತು.


ಸದರ್ ಇಲ್ಯಸ್ ಅಲರಿ ಉಸ್ತಾದರು ದುವಾ ನೆರವೇರಿಸಿ ಸಂಘದ ಕೋಶಾಧಿಕಾರಿ ಶಂಶುದ್ಧೀನ್, ಮಜೀದ್ ಬಿರಾಲಿ ಉಚ್ಚಿಲ, ರಫೀಕ್ ಸಾಬ್ ಮಣಿಪುರ, ಸಲಾಂ ಮಣಿಪುರ, ಹಾರಿಸ್ ಸಂಸು ಮಣಿಪುರ, ಆಸಿಫ್ KM, ಹಂಝ ಪೊಣ್ಣಾನಿ ಹಾಗೂ ಇತರ ಸಹೋದರರು ಸಹಕರಿಸುವ ಮೂಲಕ ರಮಝಾನ್ ಕಿಟ್ಟನ್ನು ಜನರಿಗೆ ನೀಡಲಾಯಿತು. ಕುವೈಟ್ ಮಣಿಪುರ ಮುಸ್ಲಿಮ್  ಎಸೋಶಿಯೇಷನ್, ಕುವೈಟ್  ಇದು ಸುಮಾರು 18 ವರ್ಷದಿಂದ ಜನಪರ ಸಮಾಜ ಸೇವೆಯನ್ನು ತೊಡಗಿಸಿಕೊಂಡಿದೆ. ಈ ಬಾರಿ 77 ಬ್ಯಾಡ ಕುಟುಂಬಗಳಿಗೆ ಆಹಾರದ ಕಿಟ್'ನ್ನು ವಿತರಿಸಲಾಯಿತು.

Ads on article

Advertise in articles 1

advertising articles 2

Advertise under the article