ಗುರುವಾರದಿಂದ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಾದ್ಯಂತ ರಮಝಾನ್ ಉಪವಾಸ ಆರಂಭ
Wednesday, March 22, 2023
ಮಂಗಳೂರು: ಪವಿತ್ರ ರಮಝಾನ್‌ನ ಪ್ರಥಮ ಚಂದ್ರದರ್ಶನವು ಇಂದು ಆಗಿರುವುದರಿಂದ ಗುರುವಾರದಿಂದ(ಮಾರ್ಚ್ 23) ರಮಝಾನ್ ಉಪವಾಸ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿರ್ದೇಶಿಸಿದಂತೆ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಖತೀಬರಾದ ಅಲ್‌ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಉಸ್ತಾದರು ತಿಳಿಸಿದ್ದಾರೆ.
ಕೇರಳದ ಕಾಪಾಡ್ ಎಂಬಲ್ಲಿ ರಂಝಾನ್ ತಿಂಗಳ ಚಂದ್ರ ದರ್ಶನವಾಗಿದ್ದರಿಂದ ನಾಳೆಯಿಂದ (ಮಾರ್ಚ್ 23 ಗುರುವಾರ) ರಂಝಾನ್ ತಿಂಗಳ ಉಪವಾಸ ಪ್ರಾರಂಭ ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ.