ಜನಸಾಮಾನ್ಯರಿಗೆ ಬಿಗ್ ಶಾಕ್; ಗೃಹ ಬಳಕೆ ಹಾಗು ವಾಣಿಜ್ಯ ಬಳಕೆ LPG ಸಿಲಿಂಡರ್ ಬೆಲೆ ಭಾರೀ ಏರಿಕೆ
ನವದೆಹಲಿ: ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇಂದಿನಿಂದ (ಮಾರ್ಚ್ 1 ರಂದು) ಅಡುಗೆ ಅನಿಲ ಮತ್ತು ವಾಣಿಜ್ಯ LPG ಸಿಲಿಂಡರ್ ಬೆಲೆ ಭಾರೀ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ಮತ್ತಷ್ಟು ಬಿಸಿ ತಾಗಿದಂತಾಗಿದೆ.
ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‍ಗೆ 350.50 ಹಾಗೂ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‍ಗೆ 50 ರೂ.ರಷ್ಟು ಹೆಚ್ಚಿಸಿ ಜನರಿಗೆ ಶಾಕ್ ನೀಡಲಾಗಿದೆ.
14.2 ಕೆಜಿ ತೂಕದ ದೇಶೀಯ LPG ಸಿಲಿಂಡರ್ ಬೆಲೆ ಇಂದಿನಿಂದ 50 ರೂಪಾಯಿ ಹೆಚ್ಚಳವಾಗುತ್ತದೆ. ಪರಿಷ್ಕೃತ ದರಗಳ ಪ್ರಕಾರ ವಾಣಿಜ್ಯ LPG ಸಿಲಿಂಡರ್‌ಗಳು ದೆಹಲಿಯಲ್ಲಿ ಪ್ರತಿ ಯೂನಿಟ್‍ಗೆ 2,119.50 ರೂ. ಮತ್ತು ಗೃಹ ಬಳಕೆಯ LPG ಸಿಲಿಂಡರ್ ಬೆಲೆ ಪ್ರತಿ ಯೂನಿಟ್‍ಗೆ 1,103 ರೂ. ಆಗಿದೆ.
ಬೆಂಗಳೂರಿನಲ್ಲಿ ಎಷ್ಟಾಗಿದೆ ನೋಡಿ...
ಬೆಂಗಳೂರಿನಲ್ಲಿ ಇಂದು ಸಬ್ಸಿಡಿ ರಹಿತ LPG ಸಿಲಿಂಡರ್‌ಗಳ ಬೆಲೆ 1,105 ರೂಪಾಯಿ 50 ಪೈಸೆಯಾಗಿದೆ. ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ LPG ಸಿಲಿಂಡರ್‌ಗಳ ಬೆಲೆ ಸರಿಸುಮಾರು ಇದೇ ದರ ಅನ್ವಯವಾಗುತ್ತದೆ.
ದೆಹಲಿಯಲ್ಲಿ 14.2 ಕೆ.ಜಿ LPG ಸಿಲಿಂಡರ್‌ನ ಹೊಸ ಪರಿಷ್ಕೃತ ಬೆಲೆ ಇಂದಿನಿಂದ ₹ 1053 ರ ಬದಲಿಗೆ ₹ 1103 ಆಗಿರುತ್ತದೆ. ಮುಂಬೈನಲ್ಲಿ, ಈ 1052.50 ರ ಬದಲಿಗೆ ಇನ್ನು ಮುಂದೆ 1,102.5 ಗೆ LPG ಸಿಲಿಂಡರನ್ನು ಮಾರಾಟ ಮಾಡಲಾಗುತ್ತದೆ. ಕೋಲ್ಕತ್ತಾದಲ್ಲಿ 1,079ರ ಬದಲು 1,129 ಹಾಗೂ ಚೆನ್ನೈನಲ್ಲಿ 1,068.50ರ ಬದಲಿಗೆ 1,118.5ರಷ್ಟು LPG ಸಿಲಿಂಡರ್ ದುಬಾರಿಯಾಗಿದೆ.
ಇಂದಿನಿಂದ ವಾಣಿಜ್ಯ LPG ಸಿಲಿಂಡರನ್ನು ದೆಹಲಿಯಲ್ಲಿ 1,769 ಬದಲಿಗೆ 2,119.5ಕ್ಕೆ ಲಭ್ಯವಿರುತ್ತದೆ. ಕೋಲ್ಕತ್ತಾದಲ್ಲಿ LPG ಸಿಲಿಂಡರನ್ನು 1,870 ಇದ್ದದ್ದು ಈಗ 2,221.5 ಆಗಿದೆ.ಮುಂಬೈನಲ್ಲಿ LPG ಸಿಲಿಂಡರನ್ನು ಇದರ ಬೆಲೆ ಈಗ 1,721 ರಿಂದ 2,071.50ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ 1,917ಕ್ಕೆ ಸಿಗುತ್ತಿದ್ದ LPG ಸಿಲಿಂಡರ್ ಈಗ 2,268ಕ್ಕೆ ದೊರೆಯಲಿದೆ.