5 ರೂ. ಮುಖಬೆಲೆಯ ಹಳೆಯ ನಾಣ್ಯ ಕಣ್ಮರೆಯಾಗಲು ಬಾಂಗ್ಲಾದೇಶೀಯರೇ ಕಾರಣ! ಶೇವಿಂಗ್ ಬ್ಲೇಡ್'ಗಾಗಿ ನಾಣ್ಯದ ಬಳಕೆ !

5 ರೂ. ಮುಖಬೆಲೆಯ ಹಳೆಯ ನಾಣ್ಯ ಕಣ್ಮರೆಯಾಗಲು ಬಾಂಗ್ಲಾದೇಶೀಯರೇ ಕಾರಣ! ಶೇವಿಂಗ್ ಬ್ಲೇಡ್'ಗಾಗಿ ನಾಣ್ಯದ ಬಳಕೆ !

ನವದೆಹಲಿ: 5 ರೂ. ಮುಖಬೆಲೆಯ ಹಳೆಯ ನಾಣ್ಯದ ಬದಲು ಈಗ ಆರ್​ಬಿಐ ಗೋಲ್ಡನ್ ಬಣ್ಣದ ಹೊಸ 5 ರೂ ನಾಣ್ಯಗಳನ್ನು ಹೆಚ್ಚು ಚಲಾವಣೆ ತಂದಿದೆ. ಇದಕ್ಕೆ ಮುಖ ಕಾರಣ ಸ್ಮ#ಗ್ಲಿಂಗ್!

ಬಾಂಗ್ಲಾದೇಶೀಯರು ಈ ಹಳೆಯ ನಾಣ್ಯಗಳನ್ನು ತಮ್ಮ ದೇಶಕ್ಕೆ ಸ್ಮ#ಗ್ಲಿಂಗ್ ಮಾಡುತ್ತಿದ್ದರು. ಭಾರತದ ಹಳೆಯ 5 ರೂ ನಾಣ್ಯಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. 

5 ರೂ. ಮುಖಬೆಲೆಯ ಹಳೆಯ ನಾಣ್ಯದಿಂದ ಹಲವು ರೇಜರ್ ಬ್ಲೇಡ್ ತಯಾರಿಸಬಹುದಾದಷ್ಟು ಗುಣಮಟ್ಟ ಉಳ್ಳದಾಗಿದೆ. 5 ರೂ. ಮುಖಬೆಲೆಯ ಹಳೆಯ ನಾಣ್ಯ ಕರಗಿಸಿದರೆ ಅದರಿಂದ ಬರುವ ಲೋಹ ಬಳಸಿ 6 ಬ್ಲೇಡ್ (ಶೇವಿಂಗ್ ಬ್ಲೇಡ್) ತಯಾರಿಸಬಹುದಂತೆ. ತಯಾರಿಸಲಾಗುವ ಒಂದೊಂದು ಬ್ಲೇಡ್ ಅನ್ನು 2 ರೂಗೆ ಮಾರಬಹುದು. ಈ ಮೂಲಕ ಐದು ರೂ ನಾಣ್ಯದಿಂದ 12 ರೂ ಆದಾಯ ಮಾಡಿಕೊಳ್ಳಬಹುದು. ಇದೇ ಕಾರಣಕ್ಕಾಗಿ ಹಳೆಯ 5 ರೂ ನಾಣ್ಯಗಳನ್ನು ಕಳ್ಳಸಾಗಾಣಿಕೆದಾರರು ದಂಡಿದಂಡಿಯಾಗಿ ಬಾಂಗ್ಲಾದೇಶಕ್ಕೆ ಸಾಗಿಸುತ್ತಿದ್ದುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದನ್ನಿ ಅರಿತ ಆರ್​ಬಿಐ ಹೊಸ ನಾಣ್ಯ ತಯಾರಿಕೆ ಶುರುವಿಟ್ಟಿತು.

Ads on article

Advertise in articles 1

advertising articles 2

Advertise under the article