ಮಲ್ಲು ಹಲಗಿ ಕುರಕುಂದಾಗೆ 'ಶಿಕ್ಷಣ ಶ್ರೀ ರಾಜ್ಯ ಪ್ರಶಸ್ತಿ' ಪ್ರದಾನ
ಯಾದಗಿರಿ: ಇಲ್ಲಿನ ಎಸ್. ಡಿ. ಕನ್ನಡ ಹಾಗೂ ಆಂಗ್ಲ ಮಾದ್ಯಮ ಶಾಲೆಯ ವತಿಯಿಂದ ನಡೆದ ದ್ವಿತೀಯ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಕುಂದಾ ಗ್ರಾಮದ ನಿವಾಸಿಯಾದ ಮಲ್ಲು ಹಲಗಿ ಕುರಕುಂದಾರಿಗೆ ಸಮಾಜಿಕ ಸೇವಾ ಚಟುವಟಿಕೆಗಳನ್ನು ಗುರುತಿಸಿ 'ಶಿಕ್ಷಣ ಶ್ರೀ ರಾಜ್ಯ ಪ್ರಶಸ್ತಿ'ಯನ್ನು ಖಾಸ ಮಠದ ಶಾಂತವೀರ ಗುರುಮುರುಘರಾಜೇಂದ್ರ ಶ್ರೀ ಗಳು ನೀಡಿ ಆಶೀರ್ವಾದ ಮಾಡಿದರು.
ಅನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಹಾಗೂ ಸಂಸ್ಥಾಪಕ ದುರ್ಗಪ್ಪ ಪೂಜಾರಿ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಗೌರವಿಸುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಶೀರಗೊಳ, ರೀಯಾಜ್ ಪಟೇಲ, ವರ್ಕನಳ್ಳಿ, ಪತ್ರಕರ್ತ ಪ್ರವೀಣ ಕುಮಾರ್, ಭೀಮರಾಯ ಕೊಂಡೆ, ಮಲ್ಲಿಕಾರ್ಜುನ ಮೇಟಿ, ಸುಭಾಸ್ ಮಾಳಿಕೇರಿ, ಶೀವರಾಜ ಪುಜಾರಿ, ಸುಜ್ಞಾನ ಪುಜಾರಿ, ಬಾಬು ಶೀರಗೊಳ, ಮಲ್ಲಿಕಾರ್ಜುನ ಕೊಂಕಲ್, ಮಾರ್ಕಂಡೇಯ ಮುಂಡ್ರಕೇರಿ ಹಾಗೂ ಶಾಲಾ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.