ಹೈದರಾಬಾದಿನಾದ್ಯಂತ ರಾರಾಜಿಸುತ್ತಿದೆ ಬಿ.ಎಲ್ ಸಂತೋಷ್ ಬೇಕಾಗಿದ್ದಾರೆ ಎನ್ನುವ ಪೋಸ್ಟರ್!
ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬೇಕಾಗಿದ್ದಾರೆ ಎನ್ನುವ ಪೋಸ್ಟರ್ ಹೈದರಾಬಾದಿನಾದ್ಯಂತ ಗುರುವಾರ ರಾರಾಜಿಸುತ್ತಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರು ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ, ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಹೈದರಾಬಾದ್‌ನಲ್ಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಪೋಸ್ಟರ್ ಅಂಟಿಸಲಾಗಿದ್ದು, ಈ ಪೋಸ್ಟರ್ ವೈರಲ್ ಆಗಿದೆ.
BJP ವಿರುದ್ಧ ತೆಲಂಗಾಣ ಆಡಳಿತಾರೂಢ ಭಾರತ್ ರಾಷ್ಟ್ರೀಯ ಸಮಿತಿ ಟ್ವಿಟ್ಟರ್ ವಾರ್ ಆರಂಭಿಸಿದೆ. ಅಂಟಿಸಲಾಗಿರುವ ಪೋಸ್ಟರ್‌ನಲ್ಲಿ ಬಿ.ಎಲ್ ಸಂತೋಷ್ ಅವರ ಫೋಟೊ ಹಾಕಲಾಗಿದ್ದು, ಹೈದರಾಬಾದ್ನ 2 ಪ್ರತ್ಯೇಕ ಸ್ಥಳಗಳಲ್ಲಿ ಶಾಸಕರನ್ನು ಖರೀದಿಸುವಲ್ಲಿ ಪರಿಣಿತರಾಗಿರುವ ಬಿಎಲ್ ಸಂತೋಷ್ ಬೇಕಾಗಿದ್ದಾರೆ ಎನ್ನುವ ಪೋಸ್ಟರ್ ಹಾಕಲಾಗಿದೆ. ಬಿ.ಎಲ್. ಸಂತೋಷ್ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿ.ಎಲ್. ಸಂತೋಷ್ ಅವರನ್ನು ಹುಡುಕಿಕೊಟ್ಟರೆ ಅದಕ್ಕೆ ಬಹುಮಾನವಾಗಿ 15,00,000 ರೂ.ಗಳ ಭರವಸೆಯನ್ನು ಈಡೇರಿಸಲಾಗುವುದು ಎಂದು ಹೇಳಿದೆ.