ಮುಸ್ಲಿಮರ ಪವಿತ್ರ ರಮದಾನ್ ಉಪವಾಸ ವೃತಕ್ಕೆ ಶುಭ ಹಾರೈಸಿದ ಮೋದಿ
Friday, March 24, 2023
ನವದೆಹಲಿ: ಶುಕ್ರವಾರದಿಂದ ದೇಶದೆಲ್ಲೆಡೆ ಮುಸ್ಲಿಮರ ಪವಿತ್ರ ರಮದಾನ್ ಉಪವಾಸ ವೃತ ಆರಂಭವಾಗಿದ್ದು, ಈ ಪವಿತ್ರ ತಿಂಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.
ರಂಜಾನ್ ಹಿನ್ನೆಲೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ರಮದಾನ್ ಉಪವಾಸಕ್ಕೆ ಶುಭಾಶಯ ತಿಳಿಸುತ್ತಾ, ಈ ಪವಿತ್ರ ತಿಂಗಳು ನಮ್ಮ ಸಮಾಜದಲ್ಲಿ ಹೆಚ್ಚಿನ ಏಕತೆ ಹಾಗೂ ಸಾಮರಸ್ಯ ತರಲಿ, ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ ಎಂದು ಹಾರೈಸಿದ್ದಾರೆ.