ಅದಾನಿ ಬಗ್ಗೆ ನಾನು ಎತ್ತುತ್ತಿರುವ ಪ್ರಶ್ನೆಯಿಂದ ಮೋದಿಗೆ ಭಯ ಕಾಡುತ್ತಿದೆ: ಈ ಹಿನ್ನೆಲೆಯಲ್ಲಿ ನನ್ನನ್ನು ಅನರ್ಹಗೊಳಿಸಲಾಗಿದೆ: ರಾಹುಲ್ ಗಾಂಧಿ

ಅದಾನಿ ಬಗ್ಗೆ ನಾನು ಎತ್ತುತ್ತಿರುವ ಪ್ರಶ್ನೆಯಿಂದ ಮೋದಿಗೆ ಭಯ ಕಾಡುತ್ತಿದೆ: ಈ ಹಿನ್ನೆಲೆಯಲ್ಲಿ ನನ್ನನ್ನು ಅನರ್ಹಗೊಳಿಸಲಾಗಿದೆ: ರಾಹುಲ್ ಗಾಂಧಿ

ನವದೆಹಲಿ: ಅದಾನಿ ವಿವಾದಕ್ಕೆ ಸಂಬಂಧಿಸಿ ನನ್ನ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಭಯ ಕಾಡಿದ್ದರಿಂದ ನನ್ನ ಲೋಕಸಭಾ ಸದಸ್ಯತ್ವದಿಂದ  ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಲೋಕಸಭೆ ಸದಸ್ಯತ್ವ ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಅದಾನಿ ಪ್ರಕರಣದಲ್ಲಿ ಆತಂಕಗೊಂಡಿರುವ ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸಲು ಈ ಆಟವನ್ನು ಆಡಿದೆ ಎಂದು ಕಿಡಿಕಾರಿದರು.

ನನ್ನನ್ನು ಈ ರೀತಿ ಅನರ್ಹಗೊಳಿಸಿರುವುದರಿಂದ ಅಥವಾ ಜೈಲಿಗೆ ಕಳುಹಿಸುವುದರಿಂದಲೋ ನಾನು ಹೆದರಲ್ಲ, ಇದರಿಂದ ಹಿಂದಕ್ಕೂ ಸರಿಯಲ್ಲ. ಷೇರು ಅಕ್ರಮದಲ್ಲಿ ಸಿಲುಕಿರುವ ಉದ್ಯಮಿ ಗೌತಮ್ ಅದಾನಿ ಹಾಗು ಪ್ರಧಾನಿ ಮೋದಿ ಸಂಬಂಧದ ಬಗ್ಗೆ ಪ್ರಶ್ನೆ ಮಾಡುತ್ತಲೇ ಇರುತ್ತೇನೆ ಎಂದ ಅವರು, ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.

Ads on article

Advertise in articles 1

advertising articles 2

Advertise under the article