ಉಚ್ಚಿಲದಲ್ಲಿ ಭೀಕರ ಅಪಘಾತ: ಬೈಕಿಗೆ ಟ್ಯಾಂಕರ್ ಡಿಕ್ಕಿ: ಇಬ್ಬರು ಸ್ಥಳದಲ್ಲಿಯೇ ಸಾವು

ಉಚ್ಚಿಲದಲ್ಲಿ ಭೀಕರ ಅಪಘಾತ: ಬೈಕಿಗೆ ಟ್ಯಾಂಕರ್ ಡಿಕ್ಕಿ: ಇಬ್ಬರು ಸ್ಥಳದಲ್ಲಿಯೇ ಸಾವು

ಉಚ್ಚಿಲ: ಇಲ್ಲಿನ ಸುಭಾಸ್ ರಸ್ತೆ ಸಮೀಪ ಟ್ಯಾಂಕರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಲಿಮಾರಿನ ಅವರಾಲುಮಟ್ಟು ಗ್ರಾಮದ ಇಬ್ಬರು ಸ್ಥಳದಲ್ಲಿಯೇ  ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ಮೃತರನ್ನು ಪಲಿಮಾರಿನ ಅವರಾಲುಮಟ್ಟು ಗ್ರಾಮದ ಸುಬ್ರಹ್ಮಣ್ಯ ಹಾಗು ಗಿರೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಉಡುಪಿಯಿಂದ ಪಡುಬಿದ್ರೆ ಕಡೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಟ್ಯಾಂಕರೊಂದು ಡಿಕ್ಕಿ ಹೊಡೆದಿದೆ ಎಂದು ಪಡುಬಿದ್ರರ ಪೊಲೀಸರು ತಿಳಿಸಿದ್ದಾರೆ.

ಬೈಕ್ ಗೆ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಟ್ಯಾಂಕರ್, ಸವಾರನನ್ನು ಕೆಲವು ಮೀಟರ್ ದೂರದವರೆಗೆ ಎಳೆದೊಯ್ದು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ನಿಂತಿದೆ. ಟ್ಯಾಂಕರ್ ಅಡಿಯಲ್ಲಿದ್ದ ಮೃತದೇಹವನ್ನು ಮೇಲಕ್ಕೆತ್ತಲು ಅರಸಾಹಸ ಪಡಬೇಕಾಯಿತು. 

ಟ್ಯಾಂಕರ್ ಅಡಿಯಲ್ಲಿದ್ದ ಮೃತದೇಹಗಳನ್ನು ಮೇಲಕೆತ್ತಿದ ಉಚ್ಚಿಲದ ಯುವಕರು 

ಅಪಘಾತ ನಡೆದ ಕೂಡಲೇ ಉಚ್ಚಿಲದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್, ಸಾದಿಕ್ NH, ವೈ.ಸಿ.ಆಸೀಫ್, ನವಾಜ್ ಮೂಳೂರು, ಸಂತು ಮೂಳೂರು, ರಹೀಮ್ YS ಮುಂತಾದವರು ಆಗಮಿಸಿ ಮೃತದೇಹಗಳನ್ನು ಟ್ಯಾಂಕರಿನ ಅಡಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರು. ಈ ಯುವಕರು ದಂಡು ಉಚ್ಚಿಲ ಸುತ್ತಮುತ್ತ ಅಪಘಾತವಾದ ಕೂಡಲೇ ಜಾತಿ-ಧರ್ಮವಾನ್ನಿ ಲೆಕ್ಕಿಸದೆ ಅಲ್ಲಿಗೆ ದೌಡಾಯಿಸಿ ಗಾಯಾಳುಗಳನ್ನು, ಮೃತರನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಸೇವೆಯನ್ನು ನೀಡುತ್ತಿದ್ದಾರೆ. ಇವರ ಈ ಸೇವೆಯನ್ನು ಈ ಉಚ್ಚಿಲ ಸುತ್ತಮುತ್ತಲಿನ ಭಾಗದ ಜನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.

Ads on article

Advertise in articles 1

advertising articles 2

Advertise under the article