'ಹೆಮ್ಮೆಯ ದುಬೈ ಕನ್ನಡ ಸಂಘ'ದ ನೂತನ ಅಧ್ಯಕ್ಷರಾಗಿ ಮಧು ದಾವಣಗೆರೆ, ಉಪಾಧ್ಯಕ್ಷರಾಗಿ ಹಾದಿಯ ಮಂಡ್ಯ, ಕಾರ್ಯದರ್ಶಿಯಾಗಿ ರಫೀಕಲಿ ಕೊಡಗು ಆಯ್ಕೆ

'ಹೆಮ್ಮೆಯ ದುಬೈ ಕನ್ನಡ ಸಂಘ'ದ ನೂತನ ಅಧ್ಯಕ್ಷರಾಗಿ ಮಧು ದಾವಣಗೆರೆ, ಉಪಾಧ್ಯಕ್ಷರಾಗಿ ಹಾದಿಯ ಮಂಡ್ಯ, ಕಾರ್ಯದರ್ಶಿಯಾಗಿ ರಫೀಕಲಿ ಕೊಡಗು ಆಯ್ಕೆ

ಅಬುಧಾಬಿ: ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ವಿವಿಧ ರೀತಿಯ ಕನ್ನಡಪರ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಸಪ್ತ ಸಾಗರದಾಚೆ ಅರಬರ ಮರಳು ಭೂಮಿ ಮಾಯಾನಗರಿ ದುಬೈಯಲ್ಲಿ ಪಸರಿಸಿ ಬೆಳೆಸುತ್ತಿರುವ ಹೆಮ್ಮೆಯ ದುಬೈ ಕನ್ನಡ ಸಂಘ,ಯುಎಇ ಇದರ 2023-24ನೇ ಸಾಲಿನ ಅಧ್ಯಕ್ಷರಾಗಿ ಶ್ರೀಯುತ ಮಧು ದಾವಣಗೆರೆ ಅವರು ನೇಮಕಗೊಂಡಿದ್ದಾರೆ, ಉಪಾಧ್ಯಕ್ಷರಾಗಿ ಶ್ರೀಮತಿ ಹಾದಿಯ ಮಂಡ್ಯ ಮತ್ತು ಮುಖ್ಯ ಕಾರ್ಯದರ್ಶಿಯಾಗಿ ರಫೀಕಲಿ ಕೊಡಗು ಅವರು ನೇಮಕಗೊಂಡರು.













ಮಾರ್ಚ್ 19 ಭಾನುವಾರದಂದು ಯುನಿಕ್ ವರ್ಲ್ಡ್ ಎಜುಕೇಶನ್ ಬೋರ್ಡ್ ರೂಮಿನಲ್ಲಿ ವಾರ್ಷಿಕ ಮಹಾಸಭೆ ಮತ್ತು ಸಮಿತಿಗೆ ಹೊಸ ಸದಸ್ಯರ ಸೇರ್ಪಡೆ ಸಮಾರಂಭ ನಡೆಯಿತು, ಸಂಘದ ಸದಸ್ಯರಾದ ವಿಷ್ಣುಮೂರ್ತಿ ಮೈಸೂರು ಅವರು ಆಗಮಿಸಿದ ಸರ್ವರನ್ನು ಸ್ವಾಗತ ಕೋರಿದರು, ಸಂಘದ ಶ್ರೀಮತಿ ಮಮತಾ ಮನ್ಬೋಲ್ ಅವರು ಸಮಿತಿಗೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಹೆಮ್ಮೆಯ ಕನ್ನಡ ಸಂಘದ ಗುರಿ ಮತ್ತು ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು.

ಕಳೆದ ಸಾಲಿನ ಅಧ್ಯಕ್ಷರಾದ ಸುದೀಪ್ ದಾವಣಗೆರೆ ಅವರು ಮಧು ದಾವಣಗೆರೆ ಅವರಿಗೆ ಹೆಮ್ಮೆಯ ಕನ್ನಡ ಸಂಘದ ಲೋಗೋ ಧ್ವಜ ಹಸ್ತಾಂತರಿಸುವ ಮೂಲಕ ಅಧ್ಯಕ್ಷರಾಗಿ ಪಾದಾರ್ಪಣೆ ಮಾಡಿದರು, ಕಾರ್ಯಕ್ರಮಕ್ಕೆ ಹೆಮ್ಮೆಯ ಕನ್ನಡ ಸಂಘದ ಎಲ್ಲಾ ಪಧಾದಿಕಾರಿಗಳು ಮತ್ತು ಸಲಹಾ ಸಮಿತಿ ಸದಸ್ಯರುಗಳು ಆಗಮಿಸಿ ಮಧು ದಾವಣಗೆರೆ ಅವರ ಸಾರಥ್ಯದ ತಂಡಕ್ಕೆ ಸಂಪೂರ್ಣ ಸಹಕಾರ ಸೂಚಿಸಿದರು.  

ಹೆಮ್ಮೆಯ ದುಬೈ ಕನ್ನಡ ಸಂಘದ 2023-24ನೇ ಸಾಲಿನ ಪದಾಧಿಕಾರಿಗಳು:

ಸಲಹಾ ಸಮಿತಿ ಸದಸ್ಯರು.

ರಾಘವೇಂದ್ರ ಬೆಂಗಳೂರು    

ಸುದೀಪ್ ದಾವಣಗೆರೆ 

ಮಮತಾ ಮನ್ಬೋಲ್ ಮೈಸೂರು

ಡಾ.ರಶ್ಮಿ ಬೆಂಗಳೂರು 

ಅಡ್ವಕೇಟ್ ಖಲೀಲ್ ಕಾಸರಗೋಡು ಕನ್ನಡಿಗ  

ನದೀಮ್ ಉತ್ತರ ಕನ್ನಡ  

ತೌಸೀಫ್ ಹುಬ್ಬಳ್ಳಿ 

ಕಾರ್ಯಕಾರಿ ಸಮಿತಿ ಸದಸ್ಯರುಗಳು

ಅಧ್ಯಕ್ಷರು - ಮಧು ದಾವಣಗೆರೆ 

ಉಪಾಧ್ಯಕ್ಷರು - ಹಾದಿಯ ಮಂಡ್ಯ

ಮುಖ್ಯ ಕಾರ್ಯದರ್ಶಿ-ಜಾಬ್ ಹೆಲ್ಪಿಂಗ್ ವಿಂಗ್ ಸಂಚಾಲಕರು - ರಫೀಕಲಿ ಕೊಡಗು 

ಕೋಶಾಧಿಕಾರಿ - ಮೊಹಿಯುದ್ದೀನ್ ಹುಬ್ಬಳ್ಳಿ 

ದುಬೈ ಕನ್ನಡ ಸಾಹಿತ್ಯ ಸಂಘ ಮುಖ್ಯ ಸಂಚಾಲಕರು - ವಿಷ್ಣುಮೂರ್ತಿ ಮೈಸೂರು 

ಸಹಾಯ ಹಸ್ತ ವಿಭಾಗ ಮುಖ್ಯ ಸಂಚಾಲಕರು  - ಶಂಕರ್ ಬೆಳಗಾವಿ 

ಮಹಿಳಾ ಘಟಕ ಮುಖ್ಯ ಸಂಚಾಲಕಿ -  ಪಲ್ಲವಿ ದಾವಣಗೆರೆ 

ಮಕ್ಕಳ ಘಟಕ ಮುಖ್ಯ ಸಂಚಾಲಕಿ - ಅನಿತಾ ಬೆಂಗಳೂರು 

ಯುಎಇ ಕನ್ನಡ ಹೆಲ್ತ್ ಕೇರ್ ಪ್ರೋಫೆಷನಲ್ಸ್ ಮುಖ್ಯ ಸಂಚಾಲಕಿ  - ಡಾ.ಸವಿತಾ ಮೈಸೂರು  

     ಕನ್ನಡಿಗಾಸ್ ಬಿಸ್ನೆಸ್ ಫೋರಮ್ ಮುಖ್ಯ ಸಂಚಾಲಕರು  - ವರದರಾಜ್ ಕೋಲಾರ 

ಕ್ರೀಡಾ ವಿಭಾಗ ಮತ್ತು ಫುಜೆರಾ ಮುಖ್ಯ ಸಂಚಾಲಕರು  - ಅಕ್ರಮ್ ಕೊಡಗು

ಉಪಸಮಿತಿ ಸದಸ್ಯರುಗಳು

ಅಡ್ವಕೇಟ್ ಗೌತಮ್ ಬೆಂಗಳೂರು - ಕಾನೂನು ಸಲಹೆಗಾರರು 

     ಅಬ್ಬಾಸ್ ಬೆಂಗಳೂರು - ಶಿಕ್ಷಣ ವಿಭಾಗ 

ನಜೀರ ಮಂಡ್ಯ - ಮಹಿಳಾ ಘಟಕ ಸದಸ್ಯೆ  

ಸೋಮಶೇಖರ್ ರೆಡ್ಡಿ - ಸಂಚಾಲಕರು ಅಬುಧಾಬಿ 

ಹಾದಿ ಕುಂದಾಪುರ -ಸಹಾಯ ಹಸ್ತ ವಿಭಾಗ ಸಹ ಸಂಚಾಲಕರು 

ಸ್ವಾತಿ ಚಿತ್ರದುರ್ಗ - ಮಾಧ್ಯಮ ಘಟಕ ಸಂಚಾಲಕಿ  

ಲಾರೆನ್ಸ್ ಮಂಗಳೂರು -  ಸಂಚಾಲಕರು, ರಾಸ್ ಅಲ್ ಖೈಮಾ 

     ಝಾರ್ ಕಾಸರಗೋಡು ಕನ್ನಡಿಗ - ಸಂಚಾಲಕರು ಅಜ್ಮಾನ್ 

  ಶ್ರೀನಿವಾಸ್ ಅರಸ್ ಬೆಂಗಳೂರು - ಸಂಚಾಲಕರು, ಅಬುಧಾಬಿ

ಯ್ಯದ್ ಇರ್ಷಾದ್ ಶಿವಮೊಗ್ಗ -  ಸಂಚಾಲಕರು, ರಾಸ್ ಅಲ್ ಖೈಮಾ 

ವೀರಪ್ಪ ಗೌಡ - ಸಂಚಾಲಕರು ಅಬುಧಾಬಿ

Ads on article

Advertise in articles 1

advertising articles 2

Advertise under the article