SDPI ಬಗ್ಗೆ ಬಿಜೆಪಿ-ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮಾಡುತ್ತಿರುವ ಆರೋಪದ ಬಗ್ಗೆ ಕಿಡಿಕಾರಿರುವ SDPI ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಆಲಿ: ಹೇಳಿದ್ದೇನು...
ಉಡುಪಿ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(SDPI )ದ ಬಗ್ಗೆ ಬಿಜೆಪಿ ಹಾಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮಾಡುತ್ತಿರುವ ಆರೋಪದ ಬಗ್ಗೆ ಕಿಡಿಕಾರಿರುವ SDPI ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಆಲಿ, SDPI ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಶಾಹಿದ್ ಆಲಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಉಡುಪಿ ಜಿಲ್ಲಾ ಅಧ್ಯಕ್ಷರುಗಳು ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮ್ಮ ಸಹನೆ ಕಳೆದುಕೊಂಡವರಂತೆ ಪತ್ರಿಕಾ ಹೇಳಿಕೆ ಕೊಡು ತ್ತಿದ್ದಾರೆ. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರು ಬಹುಸಂಖ್ಯಾತರ ಓಲೈಕೆ ಗಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷವನ್ನು ದೇಶ ವಿರೋಧಿ ಮೂಲಭೂತವಾಗಿ ಎಂದು ಉಲ್ಲೇಖಿಸುವಾಗ ತಮ್ಮ ಸಂಘಪರಿವಾರದವರು ಮಾಡಿದ ದೇಶವಿರೋಧಿ ಕುಕೃತ್ಯಗಳಾದ ಮಹಾತ್ಮ ಗಾಂಧಿ ಹತ್ಯೆ, ಬಾಬರಿ ಮಸೀದಿ ದ್ವಂಸ, ಮಲೆಗಾವ್ ಸ್ಪೋಟ, ಮಕ್ಕ ಮಸೀದಿ ಸ್ಫೋಟ, ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ, ಮರೆತಂತಿದೆ. ಎಸ್ ಡಿ ಪಿ ಐ ಕಾನೂನು ವಿರೋಧಿ ಸಂವಿಧಾನ ವಿರೋಧಿ ಜನವಿರೋಧಿ ಕೆಲಸಗಳನ್ನು ಎಂದೂ ಮಾಡಿಲ್ಲ. ಎಂದೆಂದಿಗೂ ಮಾಡುವುದಿಲ್ಲ ಇದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ತಿಳಿದಿರಲಿ ಎಂದಿದ್ದಾರೆ.
ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ನೈತಿಕತೆಯನ್ನು ಮರೆತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ ಮೇಲೆ ಸುಳ್ಳು ಅಪವಾದ ಸೃಷ್ಟಿಸಿರುತ್ತಾರೆ. ಕೈಗೆ ಎಟುಕದ ದ್ರಾಕ್ಷಿ ಹುಳಿ ಎಂಬ ಗಾದೆಯಂತೆ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವನ್ನು ದೂಷಿಸುತ್ತಾ ಇದ್ದಾರೆ. ಎರಡೂಪಕ್ಷಗಳು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ತಮ್ಮ ಸ್ವಾರ್ಥ ಗೋಸ್ಕರ ಫುಟ್ಬಾಲ್ ಚಂಡು ಎಂದು ತಿಳಿದಂತಿದೆ. ಗೋಲ್ ಮಾಡಲು ಪ್ರಯತ್ನಿಸುವವರಿಗೆ ತಿಳಿದಿರಲಿ ಇದು ಕಬ್ಬಿಣದ ಚಂಡು. SDPI ಪಕ್ಷ ರಾಷ್ಟ್ರೀಯ ಪಕ್ಷವಾಗಿದ್ದು ಸತ್ಯ ಪ್ರಾಮಾಣಿಕ ಜನಪರ ಪಕ್ಷವಾಗಿದೆ. ಇದು ಜಾತ್ಯಾತೀತ ಪಕ್ಷ ಎಂದು ಬೇರೆ ಹೇಳಬೇಕಾಗಿಲ್ಲ. ಇದರಲ್ಲಿ ದಲಿತರು ದಮನಿತರು ಶೋಷಿತರು ಹಿಂದು ಮತ್ತು ಕ್ರಿಶ್ಚಿಯನ್ ಜನತೆ ಸಮೂಹ ಸಮೂಹವಾಗಿ ಪಕ್ಷ ಸೇರ್ಪಡೆಯಾಗುತ್ತಾ ಇದ್ದಾರೆ. ಈ ಪಕ್ಷ ಈಗ ಸೆಮಿ ಫೈನಲ್ ನಲ್ಲಿ ಇದೆ. ಬರುವ ಚುನಾವಣೆಯಲ್ಲಿ ಈ ಪಕ್ಷ ಫೈನಲಿಗೆ ಬಂದು ಗೆಲುವಿನ ಪತಾಕೆ ಹಾರಿಸುವುದರಲ್ಲಿ ಸಂಶಯ ಬೇಡ ಎಂದಿದ್ದಾರೆ.
ತಮ್ಮ ತಮ್ಮ ಪಕ್ಷಗಳ ಜನಪರ ಕೆಲಸದ ಬಗ್ಗೆ ಮಾತಾಡಲು ಏನು ಇಲ್ಲದಾಗ ಬೇರೆಯವರ ಕಡೆ ಬೆರಳು ತೋರಿಸುವುದು ಬೇಡ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷ ಇಂದಿನ ತನಕ ವೋಟ್ ಬ್ಯಾಂಕ್ ಆಗಿ ಮುಸ್ಲಿಮರನ್ನು ಉಪಯೋಗಿಸಿದ್ದು ಸಾಕು.ಸೆಕ್ಯುಲರ್ ಓಟು ಪಡೆದು ನಂತರ ದುಡ್ಡಿಗಾಗಿ ಮಾಡಲ್ಪಡುವ ಕೇವಲ ಕರ್ನಾಟಕದಲ್ಲಿ 17 ಮಂದಿ ಇದ್ದದ್ದು ಕಾಂಗ್ರೆಸಿನವರೇ. ಮುಂದಿನ ದಿನಗಳಲ್ಲಿ ಎಸ್ ಡಿ ಪಿ ಐ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವ ಪಕ್ಷವನ್ನು ಸಹಿಸಲು ಕಲಿಯಿರಿ. ಇದು ನನ್ನ ಸಲಹೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಶಾಹಿದ್ ಆಲಿಯವರು ಹೇಳಿದ್ದಾರೆ.