ಇಂದು ದೇಶದಲ್ಲಿ ಸಂವಿಧಾನವನ್ನು ಯಾರಾದರೂ ವಿರೋಧ ಮಾಡಿದ್ದರೆ ಅದು RSS, ಹಿಂದೂ ಮಹಾಸಭಾ; ಅದಕ್ಕಾಗಿಯೇ ನಾನು ಈವತ್ತಿಗೂ RSS ವಿರೋಧಿ: ಸಿದ್ದರಾಮಯ್ಯ

ಇಂದು ದೇಶದಲ್ಲಿ ಸಂವಿಧಾನವನ್ನು ಯಾರಾದರೂ ವಿರೋಧ ಮಾಡಿದ್ದರೆ ಅದು RSS, ಹಿಂದೂ ಮಹಾಸಭಾ; ಅದಕ್ಕಾಗಿಯೇ ನಾನು ಈವತ್ತಿಗೂ RSS ವಿರೋಧಿ: ಸಿದ್ದರಾಮಯ್ಯ

ಮೈಸೂರು: ಇಂದು ದೇಶದಲ್ಲಿ ಸಂವಿಧಾನವನ್ನು ಯಾರಾದರೂ ವಿರೋಧ ಮಾಡಿದ್ದರೆ ಅದು RSS ಹಾಗು ಹಿಂದೂ ಮಹಾಸಭಾದವರು. ನಾನು ಅಧಿಕಾರದಲ್ಲಿರಲಿ ಬಿಡಲಿ, ನಾನು ಬದುಕಿರುವವರೆಗೂ RSSನ್ನು ವಿರೋಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಮೈಸೂರಿನ ಟಿ.ನರಸೀಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ ಅವರು, RSS  ಸಮಾಜ ನಿರ್ಮಾಣದ ವಿರೋಧಿ. ಈ ಕಾರಣಕ್ಕಾಗಿ ನಾನು RSSನ್ನು  ವಿರೋಧಿಸುತ್ತೇನೆ ಎಂದರು.

ಸಮಾಜದಲ್ಲಿ ಅಸಮಾನತೆ ಇದ್ದ ಕಾರಣಕಾಗಿ ಬಸವಣ್ಣ ಆವತ್ತು ಅನುಭವ ಮಂಟವನ್ನು ಕಟ್ಟಿದ್ದರು. ಅವತ್ತಿನ ಅನುಭವ ಮಂಟವೇ ಇವತ್ತಿನ ಸಂಸತ್​ ಎಂದ ಸಿದ್ದರಾಮಯ್ಯ, RSS, ಹಿಂದೂ ಮಹಾಸಭಾ ಸಂವಿಧಾನವನ್ನು ವಿರೋಧಿಸಿದೆ. ಈವತ್ತು ಆಡಳಿತ ನಡೆಸುತ್ತಿರುವ BJP ಸಂವಿಧಾನದ ವಿರುದ್ಧ ಇರುವ ಪಕ್ಷ. ಸಂವಿಧಾನವನ್ನು ವಿರೋಧಿಸುವುದೆಂದರೆ ಡಾ.ಅಂಬೇಡ್ಕರ್ ವಿರೋಧಿಸಿದಂತೆ. ನಮ್ಮಲ್ಲಿರುವ ಹಿಂದೂ ಬೇರೆ, ಹಿಂದುತ್ವ ಬೇರೆ. ನಾನೊಬ್ಬ ಅಪ್ಪಟ ಹಿಂದೂ, ನನ್ನ ಅಪ್ಪ ಅಮ್ಮ ಸಹ ಹಿಂದೂಗಳೇ. ನಾನು ಹಿಂದೂ ದೇವರನ್ನು ಪೂಜಿಸುತ್ತೇನೆ ಎಂದರು.

Ads on article

Advertise in articles 1

advertising articles 2

Advertise under the article