ಸಂಸದ ಮುನಿಸ್ವಾಮಿಯಿಂದ ಕಿರುಕುಳ ಆರೋಪ: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ  ಯತ್ನಿಸಿದ ದಲಿತ ಮುಖಂಡ: ಸೂಕ್ತ ತನಿಖೆ ನಡೆಸಿ ಸಂತ್ರಸ್ತನಿಗೆ ನ್ಯಾಯ ಒದಗಿಸುವಂತೆ ಸಿದ್ದರಾಮಯ್ಯ ಒತ್ತಾಯ

ಸಂಸದ ಮುನಿಸ್ವಾಮಿಯಿಂದ ಕಿರುಕುಳ ಆರೋಪ: ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ದಲಿತ ಮುಖಂಡ: ಸೂಕ್ತ ತನಿಖೆ ನಡೆಸಿ ಸಂತ್ರಸ್ತನಿಗೆ ನ್ಯಾಯ ಒದಗಿಸುವಂತೆ ಸಿದ್ದರಾಮಯ್ಯ ಒತ್ತಾಯ

ಕೋಲಾರ: ಕೋಲಾರದ ದಲಿತ ಮುಖಂಡ ಸಂದೇಶ್ ಅವರ ಮೇಲೆ ದುರುದ್ದೇಶಪೂರಿತವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಮಾನಸಿಕ ಹಿಂಸೆ ನೀಡಿ ಆತನನ್ನು ಆತ್ಮಹತ್ಯೆಗೆ ಪ್ರಯತ್ನಿಸುವಂತೆ ಮಾಡಿರುವವರು ಯಾರೇ ಆಗಲಿ ಅಂಥವರನ್ನು ತಕ್ಷಣ ಬಂಧಿಸಿ, ಪ್ರಕರಣದ ಸೂಕ್ತ ತನಿಖೆ ನಡೆಸಿ ಸಂತ್ರಸ್ತನಿಗೆ ನ್ಯಾಯ ಕೊಡಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

'ಸಿದ್ದರಾಮಯ್ಯ ದಲಿತ ವಿರೋಧಿ ಅಲ್ಲ' ಎಂದು ಹೇಳಿಕೆ ನೀಡಿದ್ದಕ್ಕಾಗಿ BJP ಸಂಸದ ಮುನಿಸ್ವಾಮಿ ತಮ್ಮ ಮೇಲೆ ಸುಳ್ಳು ಕಿಡ್ನಾಪ್ ಕೇಸು ದಾಖಲಾಗುವಂತೆ ಮಾಡಿ ಜೈಲಿಗೆ ಕಳುಹಿಸಿದ್ದರು. ಈ ಅಪಮಾನದಿಂದ ನೊಂದು ತಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಡೆತ್‌ ನೋಟ್‌ ಬರೆದಿಟ್ಟು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ KM ಸಂದೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಧ್ವನಿಯಿಲ್ಲದ ಜನರ ಪರವಾದ ಹೋರಾಟದ ಹಾದಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ಆ ಹಾದಿಯಿಂದ ವಿಮುಖಗೊಳಿಸುವ ನಿರಂತರ ಪ್ರಯತ್ನಗಳು ಖಂಡಿತಾ ನಡೆಯುತ್ತವೆ, ಇಂಥಾ ದುಷ್ಟರ ಪ್ರಯತ್ನಗಳಿಂದ ನೊಂದು ದುಡುಕಿ ಆತ್ಮಹತ್ಯೆಯ ನಿರ್ಧಾರ ಕೈಗೊಂಡರೆ ನಿಮ್ಮ ಬೆನ್ನ ಹಿಂದಿರುವ ಜನ, ನಿಮ್ಮ ಕುಟುಂಬ ಎರಡೂ ಅನಾಥವಾಗುತ್ತದೆ.

ವ್ಯವಸ್ಥೆಯಿಂದ ಅನ್ಯಾಯ, ಅಪಮಾನಕ್ಕೀಡಾಗಿ ನೊಂದಿರುವ ದಲಿತ ಮುಖಂಡ ಸಂದೇಶ್ ಅವರ ಜೊತೆ ತಾನಿದ್ದೇನೆ. ಅಪಮಾನಗಳನ್ನೇ ಸವಾಲಿನಂತೆ ಸ್ವೀಕರಿಸಿ ಗೆದ್ದ ಬಾಬಾ ಸಾಹೇಬರು ನೀಡಿರುವ ಸಂವಿಧಾನ ನಮ್ಮ ಜೊತೆಗಿದೆ. ಹೀಗಾಗಿ ನ್ಯಾಯ ಸಿಗುವ ಪೂರ್ಣ ವಿಶ್ವಾಸ ನನಗಿದೆ. ಸಂದೇಶ್ ಅವರು ಆದಷ್ಟು ಶೀಘ್ರ ಗುಣಮುಖರಾಗಿ ಬರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article