ಕಾಂಗ್ರೆಸನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಶಾಲಾ ಶಿಕ್ಷಕನಿಗೆ ಎದುರಾಯಿತು ಸಂಕಷ್ಟ: ಡಿಡಿಪಿಐ ಮುಂದೆ ಹಾಜರಾಗುವಂತೆ ಸೂಚನೆ

ಕಾಂಗ್ರೆಸನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಶಾಲಾ ಶಿಕ್ಷಕನಿಗೆ ಎದುರಾಯಿತು ಸಂಕಷ್ಟ: ಡಿಡಿಪಿಐ ಮುಂದೆ ಹಾಜರಾಗುವಂತೆ ಸೂಚನೆ

ಕೊಪ್ಪಳ: ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆಂಬ ಕಾರಣಕ್ಕೆ ಕೊಪ್ಪಳದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಸಂಕಷ್ಟವನ್ನು ಎದುರಿಸುವಂತಾಗಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಸಹಾಯಕ ಶಿಕ್ಷಕ ಸೋಮಶೇಖರ್ ಹರ್ತಿ ಅವರು ಕಾಂಗ್ರೆಸಿಗೆ ಬೆಂಬಲ ವ್ಯಕ್ತಪಡಿಸಿ ಸಂದೇಶ ಹಾಗೂ ವಿಡಿಯೋ ಲಿಂಕ್ ಶೇರ್ ಮಾಡಿರುವುದಕ್ಕೆ ಡಿಡಿಪಿಐ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.

ಸರ್ಕಾರಿ ವಲಯದಲ್ಲಿ ಸೇವೆ ಸಲ್ಲಿಸುವವರು ರಾಜಕೀಯ ಸಂದೇಶಗಳು, ವೀಡಿಯೊಗಳು ಅಥವಾ ಅಂತಹ ಯಾವುದೇ ವಿಷಯವನ್ನು ಸಾರ್ವಜನಿಕ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಸೋಮಶೇಖರ್ ಹರ್ತಿ ಅವರು ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡ ಸಂದೇಶ ಹಾಗು ವೀಡಿಯೊ ಲಿಂಕ್ ಅನ್ನು ನಾಲ್ವರು ಸರ್ಕಾರಿ ಶಾಲೆಯ ಶಿಕ್ಷಕರು ಸೇರಿದಂತೆ ಹಲವರು ಫಾರ್ವರ್ಡ್ ಮಾಡಿದ್ದಾರೆ ಎಂಬ ಆರೋಪ ಇದೆ. ಮೂಲಗಳ ಪ್ರಕಾರ, ಸೋಮಶೇಖರ್ ಹರ್ತಿ ಅವರು ಕೊಪ್ಪಳದ ರಜತ ವೈಭವ ಗ್ರೂಪ್‌ನಲ್ಲಿ "ಕಾಂಗ್ರೆಸ್ ಪಕ್ಷವು 200% ಅಧಿಕಾರಕ್ಕೆ ಬರಲಿದೆ" ಎಂದು ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

Ads on article

Advertise in articles 1

advertising articles 2

Advertise under the article