ಅಧಿವೇಶನದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದ ವೇಳೆ ಸಿಕ್ಕಿಬಿದ್ದ BJP ಶಾಸಕ ಜದಬ್ ಲಾಲ್ ನಾಥ್: ವೀಡಿಯೊ ವೈರಲ್

ಅಧಿವೇಶನದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದ ವೇಳೆ ಸಿಕ್ಕಿಬಿದ್ದ BJP ಶಾಸಕ ಜದಬ್ ಲಾಲ್ ನಾಥ್: ವೀಡಿಯೊ ವೈರಲ್

ತ್ರಿಪುರ: ತ್ರಿಪುರಾ ವಿಧಾನಸಭೆಯ ಅಧಿವೇಶನದ ವೇಳೆ BJP ಶಾಸಕ ಜದಬ್ ಲಾಲ್ ನಾಥ್ ಅವರು ಬಹಿರಂಗವಾಗಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದು, ಈ ವೀಡಿಯೊ ಈಗ ಭಾರೀ ವೈರಲ್ ಆಗುತ್ತಿದೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದ್ದು, ಕಮ್ಯುನಿಸ್ಟ್ ಪಕ್ಷಗಳ ಭದ್ರಕೋಟೆಯಾಗಿರುವ ಈ ರಾಜ್ಯದಲ್ಲಿ ಸತತ 2ನೇ ಬಾರಿಗೆ ಸರ್ಕಾರ ರಚಿಸಿರುವ ಬಿಜೆಪಿ ಶಾಸಕರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಅಧಿವೇಶನದ ವೇಳೆ ಶಾಸಕ ಜದಬ್ ಲಾಲ್ ನಾಥ್  ಸದನದಲ್ಲಿ ಕುರ್ಚಿ ಮೇಲೆ ಕುಳಿತು ಮೊಬೈಲ್ ನಲ್ಲಿ ಪೋರ್ನ್ ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ತ್ರಿಪುರಾದ ಬಾಗ್‌ಬಾಸಾ ವಿಧಾನಸಭಾ ಕ್ಷೇತ್ರದ BJP ಶಾಸಕ ಜದಾಬ್ ಲಾಲ್ ನಾಥ್ ಸದನದಲ್ಲಿ ತಮ್ಮ ಆಸನದಲ್ಲಿ ಕುಳಿತು ಪೋರ್ನ್ ವೀಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. 

CPMನ ಬಲಿಷ್ಠ ಕೋಟೆಗಳಲ್ಲಿ ಕಣಕ್ಕಿಳಿದಿರುವ ಬಗ್ಬಾಸಾ ವಿಧಾನಸಭಾ ಕ್ಷೇತ್ರದಲ್ಲಿ ಜದಬ್ ಲಾಲ್ ನಾಥ್ ಬಿಜೆಪಿ ಗೆಲುವು ಸಾಧಿಸಿದ್ದು, ಅವರು ಪೋರ್ನ್ ವೀಕ್ಷಿಸುತ್ತಿರುವ ವೀಡಿಯೊ ಈಗ ವೈರಲ್ ಆಗುತ್ತಿದೆ.

Ads on article

Advertise in articles 1

advertising articles 2

Advertise under the article