
ಉಚ್ಚಿಲ ಭಾಸ್ಕರ ನಗರದ ಸೈಯದ್ ಅರಬೀ ಜುಮಾ ಮಸೀದಿ, ಮದ್ರಸದ ನೂತನ ಅಧ್ಯಕ್ಷರಾಗಿ ರಫೀಕ್ S.K, ಪ್ರ.ಕಾರ್ಯದರ್ಶಿಯಾಗಿ ಶಬ್ಬೀರ್ ಇಸ್ಮಾಯಿಲ್ ಆಯ್ಕೆ
Tuesday, March 21, 2023
ಉಚ್ಚಿಲ: ಇಲ್ಲಿನ ಭಾಸ್ಕರ ನಗರದ ಸೈಯದ್ ಅರಬೀ ಜುಮಾ ಮಸೀದಿ ಹಾಗೂ ಮದ್ರಸದ ನೂತನ ಅಧ್ಯಕ್ಷರಾಗಿ ರಫೀಕ್ S.K (ದೀವ್) ಆಯ್ಕೆಯಾಗಿದ್ದಾರೆ.
ಮಂಗಳವಾರ ಸೈಯದ್ ಅರಬೀ ಮದ್ರಸದ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಶಬ್ಬೀರ್ ಇಸ್ಮಾಯಿಲ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಮೂಸಾ
ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್ ವೈಎಸ್
ಕೋಶಾಧಿಕಾರಿ ಇದಿನಬ್ಬ ತರಿಕೆರೆ
ಜೊತೆ ಕಾರ್ಯದರ್ಶಿಗಳಾಗಿ ಇಲ್ಯಾಸ್ ದೇಜಾಡಿ ಹಾಗು ಬಶೀರ್ ಸುಲೈಮಾನ್
ಲೆಕ್ಕಪರಿಶೋಧಕರಾಗಿ ಹಾಜಿ ಪಿ.ಮೊಹಮ್ಮದ್