ಬೀದಿ ಪಾಲಾಗುವ ಸ್ಥಿತಿಯಲ್ಲಿರುವ ಕುಂದಾಪುರ ಹಂಗಳೂರು ಹುಲಿಹಾಡಿನ ರಝಾಕ್ ಕುಟುಂಬ: ಆರ್ಥಿಕ ನೆರವಿಗಾಗಿ ಮೊರೆ
ಉಡುಪಿ: ಮಗಳ ಮದುವೆ ಹಾಗೂ ಮನೆ ದುರಸ್ತಿಯಿಂದ ಮಾಡಿರುವ ಸಾಲದಿಂದಾಗಿ ಬಡ ಕುಟುಂಬವೊಂದು ಬೀದಿಗೆ ಬಂದಿದ್ದು, ದಾನಿಗಳಿಂದ ನೆರೆವಿನ ಸಹಾಯಹಸ್ತವನ್ನು ಎದುರುನೋಡುತ್ತಿದ್ದಾರೆ.
ಮಗಳ ಮದುವೆ ಹಾಗು ಮನೆ ದುರಸ್ತಿಗೆ ಸೊಸೈಟಿಯಿಂದ ಪಡೆದುಕೊಂಡ ಸಾಲವನ್ನು ಮರುಪಾವತಿಸಲಾಗದೆ ಕುಂದಾಪುರ ಹಂಗಳೂರು ಹುಲಿಹಾಡಿ ರಸ್ತೆಯ ನಿವಾಸಿ ಅಬ್ದುಲ್ ರಝಾಕ್ ಕುಟುಂಬ ಮನೆ ಕಳೆದು ಕೊಂಡು ಬೀದಿ ಪಾಲಾಗುವ ಸ್ಥಿತಿಯಲ್ಲಿದ್ದು, ಆರ್ಥಿಕ ನೆರವು ನೀಡುವಂತೆ ಹಂಗಳೂರು ಜುಮಾ ಮಸೀದಿ ಅಧ್ಯಕ್ಷ ಎಚ್.ಬಾಬು ಕಲಂಕದರ್ ಮನವಿ ಮಾಡಿಕೊಂಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬ್ದುಲ್ ರಝಾಕ್ ಐಸ್‌ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ 3 ಮಕ್ಕಳ ಜೊತೆ ವಾಸ ಮಾಡಿಕೊಂಡಿದ್ದಾರೆ ಎಂದರು.
2011ರಲ್ಲಿ ಇವರು ಮನೆ ದುರಸ್ತಿಗಾಗಿ ಕುಂದಾಪುರದ ಸೊಸೈಟಿಯೊಂದರಲ್ಲಿ 2.5ಲಕ್ಷ ರೂ.ಸಾಲ ಪಡೆದುಕೊಂಡಿದ್ದು, ಅನಂತರ ಮಗಳ ಮದುವೆಗಾಗಿ ಅದೇ ಸೊಸೈಟಿಯಲ್ಲಿ ಮತ್ತೆ 7.5ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಹೀಗೆ ಒಟ್ಟು 10ಲಕ್ಷ ಸಾಲವನ್ನು ಪಡೆದು ಕೊಂಡರು.
ಈ ವೇಳೆ ಬಂದ ಕೊರೋನಾದಿಂದಾಗಿ ಆರ್ಥಿಕ ಅಡಚಣೆ ಉಂಟಾಗಿ ಸಾಲ ಮರು ಪಾವತಿಸಲು ಸಾಧ್ಯವಾಗದೆ ಕಷ್ಟಕ್ಕೆ ಒಳಗಾಗಿದ್ದು, ಮಕ್ಳಳೆಲ್ಲ ಮದುವೆಯಾಗಿ ಬೇರೆ ಮನೆ ಮಾಡಿಕೊಂಡಿದ್ದು, ಇದೀಗ ಮನೆಯಲ್ಲಿ ಗಂಡ ಹೆಂಡತಿ ಮಾತ್ರ ವಾಸವಾಗಿದ್ದಾರೆ. ಈ ವೇಳೆ ಸಾಲದ ಕಂತು ಪಾವತಿಸದೆ ಬಡ್ಡಿ ಮತ್ತು ಇತರ ಖರ್ಚು ಸೇರಿ ಒಟ್ಟು 33.32ಲಕ್ಷ ರೂ. ಬಾಕಿಯಾಗಿದೆ. ಈ ಹಿನ್ನೆಲೆಯಲ್ಲಿ ಸೊಸೈಟಿಯವರು ನೋಟೀಸ್ ಜಾರಿ ಮಾಡಿ ಮನೆ ಜಪ್ತಿ ಮಾಡಲು ಮುಂದಾಗಿದ್ದು, ತೀರಾ ಬಡತನದಲ್ಲಿರುವ ರಝಾಕ್ ಕುಟುಂಬ ಇದೀಗ ಬೀದಿಪಾಲಾಗುವ ಸ್ಥಿತಿಗೆ ಬಂದು ತಲುಪಿದೆ ಎಂದರು.
ಈ ಹಿನ್ನೆಲೆಯಲ್ಲಿ ದಾನಿಗಳು ಈ ಕುಟುಂಬಕ್ಕೆ ನೆರವು ನೀಡಬೇಕಾಗಿ ವಿನಂತಿಸಲಾಗಿದೆ. ನೆರವು ನೀಡಲು ಇಚ್ಛಿಸುವವರು ಅಬ್ದುಲ್ ರಝಾಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕುಂದಾಪುರ ಶಾಖೆ, ಅಕೌಂಟ್ ನಂಬರ್- 38676976298, ಐಎಫ್‌ಎಸ್‌ಸಿ ಕೋಡ್- ಎಸ್‌ಬಿಐಎನ್0011333ಕ್ಕೆ ನೀಡಬಹುದು. ಇವರನ್ನು ಮೊಬೈಲ್ ಸಂಖ್ಯೆ- 9148359339ಕ್ಕೆ ಸಂಪರ್ಕಿಸ ಬಹುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರಝಾಕ್ ಕೂಡಾ ಹಾಜರಿದ್ದರು.