
ಶಾರ್ಜಾದಲ್ಲಿ ನಡೆದ ಅಪಘಾತದಲ್ಲಿ ಮೃತನಾದ ಕನ್ನಡಿಗನ ಮೃತದೇಹವನ್ನು ಕರ್ನಾಟಕಕ್ಕೆ ತಲುಪಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ
Monday, April 3, 2023
ದುಬೈ: ಕಳೆದ ತಿಂಗಳು ಶಾರ್ಜಾ ಮುಖ್ಯ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಮೃತರಾದ ಕೊಡಗಿನ ಮೂಲದ ಕನ್ನಡಿಗ ಪ್ರವೀಣ್ ಅವರ ಮೃತ ದೇಹವನ್ನು ಅವರು ಕೆಲಸ ನಿರ್ವಹಿಸುವ ಕಚೇರಿಯ ಮುಖ್ಯಸ್ಥ ಅಸ್ಸಾಂ ಮೂಲದ ಬಾಬರ್ ಅವರ ಸಂಪೂರ್ಣ ಸಹಾಯದೊಂದಿಗೆ ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗ ಮತ್ತು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಸಹಕಾರದೊಂದಿಗೆ ಹಲವು ದಿನಗಳ ನಂತರ ತಾಯಿನಾಡಿಗೆ ಕಳುಹಿಸಲಾಯಿತು, ಸ್ನೇಹಿತನೊಂದಿಗೆ ರಸ್ತೆ ದಾಟುವಾಗ ಅಪಘಾತ ನಡೆದು ಇಬ್ಬರು ಸಹ ಸ್ಥಳದಲ್ಲೇ ಮೃತಪಟ್ಟಿದ್ದರು .
ಕೊಡಗಿನ ಗುಂಡಿಕೆರೆ ಗ್ರಾಮದಲ್ಲಿರುವ ಮೃತ ಅವರ ಮನೆ ವಾಸವಿರುವ ಸಾಮಾಜಿಕ ಕಾರ್ಯಕರ್ತ ರಫೀಕ್ ಅವರು ದುಬೈಲ್ಲಿರುವ ಬಾಬರ್ ಮತ್ತು ರಫೀಕಲಿ ಕೊಡಗು ಅವರಿಗೆ ಸುದ್ದಿಯನ್ನು ತಿಳಿಸಿ ಸಹಾಯ ಕೋರಿದ್ದರು, ಊರಿನಲ್ಲಿ ಮೃತ ದೇಹವನ್ನು ಪಡೆಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ರಫೀಕ್ ಗುಂಡಿಕೆರೆ ಅವರು ನೆರವೇರಿಸಿದ್ದು ವಿಮಾನ ನಿಲ್ದಾಣ ಹೋಗಿ ಮೃತ ದೇಹವನ್ನು ಪಡೆದು ಅಂತಿಮ ಸಂಸ್ಕಾರ ಮಾಡುವ ತನಕ ಬಹಳ ಸಹಕಾರ ಸಹಾಯ ಮಾಡಿದ್ದಾರೆ.