ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್; ಬಿಜೆಪಿ ಮತ್ತೊಂದು ವಿಕೆಟ್ ಪತನ

ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್; ಬಿಜೆಪಿ ಮತ್ತೊಂದು ವಿಕೆಟ್ ಪತನ

ಸದ್ಯದಲ್ಲಿಯೇ ದೇವಸ್ಥಾನ, ಪ್ರಾರ್ಥನಾ ಮಂದಿರ ಮಲಿನವಾಗಬಹುದು, ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟವರೇ ಇಂತಹ ಕೃತ್ಯ ಎಸಗುವ ಸಾಧ್ಯತೆ ಇದೆ ಎಂದ ಆಯನೂರು 

ಶಿವಮೊಗ್ಗ: ಬಿಜೆಪಿ ಹಿರಿಯ ಮುಖಂಡ ಆಯನೂರು ಮಂಜುನಾಥ್  MLC ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದು, ಈಶ್ವರಪ್ಪ ವಿರುದ್ಧ ಸಮಾರಾ ಘೋಷಣೆ ಮಾಡಿದ್ದು,  ಪಂಥಾಹ್ವಾನ ನೀಡಿದ್ದಾರೆ. 

ಟಿಕೆಟ್ ಸಿಗಲಿ ಬಿಡಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಮ್ಮ ಸ್ಪರ್ಧೆ ಖಚಿತ ಎಂದು ಘೋಷಣೆ ಮಾಡಿರುವ ಆಯನೂರು, ಬಿಜೆಪಿ ಪಕ್ಷದ ವೇದಿಕೆಯಲ್ಲೂ ನಾನು ವಿನಂತಿ ಮಾಡಿಕೊಂಡಿದ್ದೇನೆ. ಆದರೆ ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇನೆಂದರು.

ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಆಯನೂರು ಮಂಜುನಾಥ್, ಶಿವಮೊಗ್ಗದಲ್ಲಿ ಶಾಂಥಿ ಭಂಗ ತರಲು ಪ್ರಯತ್ನ ನಡೆಯುತ್ತಿದೆ. ಈ ಬಾರಿಯೂ ದೇವಸ್ಥಾನ, ಪ್ರಾರ್ಥನಾ ಮಂದಿರ ಮಲಿನವಾಗಬಹುದು, ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟವರೇ ಇಂತಹ ಕೃತ್ಯ ಎಸಗುವ ಸಾಧ್ಯತೆ ಇದೆ. ಆದರೆ, ಯಾರೂ ಸಂಯಮ ಕಳೆದುಕೊಳ್ಳಬಾರದು ಎಂದರು. 

ಇಲ್ಲಿ ಹಿಂದೂ - ಮುಸ್ಲಿಮರು ಎಚ್ಚರದಿಂದ ಇರಬೇಕು. ಸಂಬಂಧಪಟ್ಟ ಪೊಲೀಸ್ ಇಲಾಖೆಗಳು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ನಿಗಾವಹಿಸಬೇಕು, ಇಲ್ಲಿ ಅಶಾಂತಿ ಉಂಟುಮಾಡಿದಲ್ಲಿ ಕೊಲೆಗಳು ಕೂಡ ನಡೆಯಬಹುದು. ರಾಜ್ಯದಲ್ಲಿ ಕೇವಲ ಪ್ರಚೋದನೆಯ ಮಾತುಗಳನ್ನಾಡಿ ಜನರನ್ನು ಪ್ರಚೋದಿಸುವುದೇ ಈಶ್ವರಪ್ಪ ಸಾಧನೆಯಾಗಿದೆ. ಶಿವಮೊಗ್ಗದಲ್ಲಿ ಒಂದೇ ಒಂದು ಯೋಜನೆಯನ್ನೂ ಅವರು ಈವರೆಗೂ ತಂದಿಲ್ಲ. ಒಂದೇ ಒಂದು ಯೋಜನೆ ತಾರದ ಈಶ್ವರಪ್ಪ, ಕೇವಲ ಪ್ರಚೋದನೆ ಹೇಳಿಕೆ ನೀಡಿಕೊಂಡು ಓಡಾಡುತ್ತಿದ್ದಾರೆ. ಪ್ರಚೋದನಾ ಭಾಷಣ ಮಾಡುವುದಷ್ಟೇ ಇವರ ಬಂಡವಾಳವಾಗಿದ್ದು, ಕ್ಷೇತ್ರದ ಸಮಸ್ಯೆ ಬಗ್ಗೆ ಈವರೆಗೆ ಸದನದಲ್ಲಿ ಅವರು ಚರ್ಚೆ ಮಾಡಿಲ್ಲ ಎಂದು ಗುಡುಗಿದರು.

ಈಶ್ವರಪ್ಪರ ಚುನಾವಣೆಯ ತಂತ್ರಗಳನ್ನು ನಾನು ಅರಿತಿದ್ದೇನೆ. ಶಿವಮೊಗ್ಗದಲ್ಲಿ ಇತ್ತೀಚಿಗೆ ನಾಲ್ಕೂವರೆ ಕೋಟಿ ರೂ. ಸೀರೆ ಸಿಕ್ಕಿಬಿದ್ದಿದೆ. ಇದೇ ವೇಳೆ ವ್ಯಕ್ತಿಯೋರ್ವ 1.50 ಕೋಟಿ ರೂ ಕೊಂಡೊಯ್ಯುವಾಗ ಸಿಕ್ಕಿಬಿದ್ದಿದ್ದಾನೆ. ಈಶ್ವರಪ್ಪ‌ ಅವರ ಬಳಿ ಅಪಾರ ದುಡ್ಡಿದ್ದು, ಚುನಾವಣೆಗಾಗಿ ವಾರ್ಡ್ ಗಳಲ್ಲಿ ಹಣ ಡಿಪಾಸಿಟ್ ಇಟ್ಟಿದ್ದೀರಿ ಎಂಬುದೂ ಎಲ್ಲರಿಗೂ ಗೊತ್ತಿದೆ. ಆದರೆ ಈ ಸಲ ನಿಮ್ಮ ಹಣ ಲೆಕ್ಕಕ್ಕೆ ಇಲ್ಲ ಎಂಬುದನ್ನು ಜನರ ಮುಂದೆ ನಾನು ತೋರಿಸುತ್ತೇನೆಂದು ಸವಾಲು ಹಾಕಿದರು.

Ads on article

Advertise in articles 1

advertising articles 2

Advertise under the article