ದುಬೈಯಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಬಿಸಿಎಫ್ ಸೌಹಾರ್ದ ಇಫ್ತಾರ್ ಕೂಟ-2023

ದುಬೈಯಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಬಿಸಿಎಫ್ ಸೌಹಾರ್ದ ಇಫ್ತಾರ್ ಕೂಟ-2023

ದುಬೈ : ಬ್ಯಾರಿಸ್ ಕಲ್ಚರಲ್ ಆಫ್ ಫೋರಂ(BCF) ದುಬೈ ಯುಎಇ ಇದರ ವತಿಯಿಂದ ಸೌಹಾರ್ದತ ಬಿಸಿಎಫ್ ಸೌಹಾರ್ದ ಇಫ್ತಾರ್ ಕೂಟ 2023 (BCF IFTAR MEET  2023) ಶನಿವಾರ ದುಬೈನಲ್ಲಿ ಅದ್ದೂರಿಯಾಗಿ ಜರುಗಿತು.

ನಗರದ ದೇರಾದ ದುಬೈ ಹಾಸ್ಪಿಟಲ್‌ ನ ಮುಂಭಾಗದಲ್ಲಿರುವ ದುಬೈ ವಿಮೆನ್ ಅಸೋಸಿಯೇಷನ್ ಬಿಲ್ಡಿಂಗ್ ನ ಅಲ್ ಝಹಿಯ ಬ್ಯಾಂಕ್ವೆಟ್ ಹಾಲ್'ನಲ್ಲಿ ಕರ್ನಾಟಕ ಪರ ಎಲ್ಲಾ ಕನ್ನಡ ತುಳು ಸಂಘ ಸಂಸ್ಥೆಗಳ  ಪದಾಧಿಕಾರಿಗಳು ಮತ್ತು ಸದಸ್ಯರ ಕೂಡುವಿಕೆಯಿಂದ ಸೌಹಾರ್ದತೆಯ ಇಫ್ತಾರ್ ಕೂಟಕ್ಕೆ ಸಾಕ್ಷಿಯಾಯಿತು.























ಇಫ್ತಾರ್ ಕೂಟದ ಮೊದಲು ಬಿ.ಸಿ.ಎಫ್. ಸದಸ್ಯರ ಮಕ್ಕಳಿಗೆ ಇಸ್ಲಾಮಿಕ್ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಕುರಾನ್ ಪಠನ ಕಾರ್ಯಕ್ರಮ ನಡೆಯಿತು. ಇಸ್ಲಾಮಿಕ್ ರಸಪ್ರಶ್ನೆನಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ನಂತರ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಬಿ.ಸಿ.ಎಫ್.ನ ಅಧ್ಯಕ್ಷರು, ಮಾಹ ಪೋಷಕರಾದ ಡಾ.ಬಿ.ಕೆ.ಯೂಸುಫ್ ರವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ರಂಜಾನ್ ಪವಿತ್ರ ತಿಂಗಳ ಸಂದೇಶಗಳನ್ನು ತಿಳಿ ಹೇಳುತ್ತಾ ಬಿ.ಸಿ.ಎಫ್. ನ ಕಾರ್ಯ ವೈಖರಿಯನ್ನು ವಿವರಿಸುತ್ತ ಎಲ್ಲರೂ ಸಹಕರಿಸಬೇಕಾಗಿ ವಿನಂತಿಸಿದರು. 

ಕರ್ನಾಟಕ ಪರ ಎಲ್ಲಾ ತುಳು ಕನ್ನಡ ಸಂಘ ಸಂಸ್ಥೆಗಳ ಪರವಾಗಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ ಮಾತನಾಡಿ ಸೌಹಾರ್ದಯುತ ಇಫ್ತಾರ್ ಕೂಟಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬಿ.ಸಿ.ಎಫ್.ನ ಗೌರವ ಮಾಹ ಪೋಷಕರಾದ ಡಾ.ತುಂಬೆ ಮೊಯ್ದೀನ್ ರವರ ಪ್ರತಿನಿದಿಯಾಗಿ ತುಂಬೆ ಗ್ರೂಪ್ ಹಾಸ್ಪಿಟಾಲಿಟಿ ಮ್ಯಾನೇಜರ್ ಫರ್ಹಾದ್, ಅಲ್ ಹಾಜ್  ತಾಹಾ ಬಾಫಕಿ ತಂಗಳ್ (ಗೌರವಧ್ಯಕ್ಷರು DKSC), ಅಲ್ ಹಾಜ್ ಅಸ್ಗರಲಿ ತಂಗಳ್, ಕೆ.ಸಿ.ಎಫ್.ನ ಅಲ್ ಹಾಜ್ ಮೆಹಬೂಬ್ ಸಖಾಫಿ, ಎಮಿರೇಟ್ಸ್ ಗ್ಲಾಸ್ ನ  ರಿಜ್ವಾನುಲ್ಲಾ ಖಾನ್, ಗಡಿಯಾರ್ ಗ್ರೂಪ್ ನ ಜನಾಬ್ ಇಬ್ರಾಹಿಂ ಗಡಿಯಾರ್, ನಫೀಸ್ ಗ್ರೂಪ್'ನ ಜನಾಬ್ ಅಬೂಸಾಲಿಹ್,  ಜೋಸೆಫ್ ಮಥಿಯಾಸ್, ಕರ್ನಾಟಕ ಸಂಘ ಶಾರ್ಜಾದ ಉಪಾಧ್ಯಕ್ಷರಾದ ನೊವೆಲ್ ಅಲ್ಮೆಡಾ, ಟೆಕ್ನೋಫಿಟ್ ನ ಸಾದಿಕ್, ಭಟ್ಕಳ ಜಮಾತ್ ನ ಮುಅಲ್ಲಿಂ ಅಶ್ಫಾಕ್ ಸದಾ, IFFCO ನ ಮ್ಯಾನೇಜರ್ ಖಾಲಿದ್, ಬಿಲ್ಲವಾಸ್ ದುಬೈ ಯ ಆನಂದ ಬೈಲೂರು, ದುಬೈ ಕರ್ನಾಟಕ ಸಂಘದ ಉಪಾಧ್ಯಕ್ಷರಾದ ದಯಾ ಕಿರೋಡಿಯನ್, ದುಬೈ ಲಿಂಗಾಯತರು ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಗಮ್ಮತ್ ಕಲಾವಿದರು ದುಬೈಯ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

ಬಿ.ಸಿ.ಎಫ್.ನ ಇಫ್ತಾರ್ ಕೂಟ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಲತೀಫ್ ಮೂಲ್ಕಿ ಮತ್ತು ಬಿ.ಸಿ.ಎಫ್.ನ ಉಪಾಧ್ಯಕ್ಷರಾದ ಎಂ.ಈ.ಮೂಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಬ್ಯಾರಿಸ್ ಕಲ್ಚರಲ್ ಫೋರಂ ದುಬೈ ಯುಎಇ ಯ ಪದಾಧಿಕಾರಿಗಳಾದ  ಬಿ.ಎಮ್.ಮುಮ್ತಝ್ ಅಲಿ, ಅಮಿರುದ್ದಿನ್ ಎಸ್.ಐ, ಆಫೀಖ್ ಹುಸೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿ.ಸಿ.ಎಫ್ ನ ಕಾರ್ಯದರ್ಶಿ ಡಾ.ಕಾಪು ಮಹಮ್ಮದ್ ರವರು ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು.

ಕಾರ್ಯಕ್ರಮವನ್ನು BCF ಇಫ್ತಾರ್ ಸಮಿತಿಯ ಉಪಾಧ್ಯಕ್ಷರಾದ ಅಫೀಕ್ ಹುಸೇನ್ ಸಂಯೋಜಿಸಿದ್ದರು. BCF ನ ಉಪಾಧ್ಯಕ್ಷರಾದ ಅಮೀರುದ್ದೀನ್ SI ರವರು ಧನ್ಯವಾದ ಅರ್ಪಿಸಿದರು.

ಇಫ್ತಾರ್ ಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಸಮದ್ ಬಿರಾಲಿ, ಅಸ್ಲಂ ಕಾರಾಜೆ, DEWA ಯಾಕೂಬ್, ನವಾಝ್ ಕೋಟೆಕಾರ್, ಸತ್ತಿಕಲ್ ಬ್ರದರ್ಸ್, ಅಬ್ದುಲ್ ರೆಹಮಾನ್ ಸಜಿಪ, ಲತೀಫ್ ತಿಂಗಳಾಡಿ, ರಿಯಾಝ್ ಸುರತ್ಕಲ್,  ಅಮೀರ್ ಹಳೆಂಗಡಿ ಹಾಗು BCF ಮಹಿಳಾ ವಿಭಾಗ ಮತ್ತು ಇತರ BCF ಸದಸ್ಯರು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಶ್ರಮಿಸಿದರು.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

ಪೊಟೋ : ಅಶೋಕ್ ಬೆಳ್ಮಣ್ (ದುಬೈ)

Ads on article

Advertise in articles 1

advertising articles 2

Advertise under the article