
ಸಂಜೆ ಜೆಡಿಎಸ್ ಸೇರ್ಪಡೆ, ರಾತ್ರಿ ಮತ್ತೆ ಮರಳಿ ಗೂಡಿಗೆ; ಇನಾಯತ್ ಅಲಿ ಸಂಘಟನಾ ಚತುರತೆಗೆ ಯುವಕರು ಫುಲ್ ಫಿಧಾ: ಕಳೆದ ಒಂದು ವಾರದಿಂದ ಬಾವ ಆಪ್ತರು ಸಹಿತ ಕೈ ಹಿಡಿಯುತ್ತಿರುವ ಅನ್ಯ ಪಕ್ಷಗಳ ಕಾರ್ಯಕರ್ತರು
Friday, April 28, 2023
ಸುರತ್ಕಲ್: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರುತ್ತಿದ್ದು, ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ನೇತೃತ್ವದಲ್ಲಿ ಕ್ಷೇತ್ರದಾದ್ಯಂತ ಸಹಸ್ರಾರು ಮಂದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.
ಅದರಲ್ಲೂ ಮೊಹಿದೀನ್ ಬಾವ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಲವರು ಇನಾಯತ್ ಅಲಿ ವರ್ಚಸ್ಸು ಕಂಡು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.
ಇದೀಗಾಗಲೇ ಅನ್ಯ ಪಕ್ಷಗಳಿಂದ ಕ್ಷೇತ್ರದಾದ್ಯಂತ ಸಾವಿರಕ್ಕೂ ಮಿಕ್ಕಿದ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.