ಇಂದು ಇನಾಯತ್ ಅಲಿ ನಾಮಪತ್ರ ಸಲ್ಲಿಕೆ; ಬೆಳಗ್ಗೆ ಕಾವೂರು ಜಂಕ್ಷನ್'ನಲ್ಲಿ ಬಹಿರಂಗ ಸಭೆ
Thursday, April 20, 2023
ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಪಾರ್ಮ್ ಪಡೆದಿರುವ ಇನಾಯತ್ ಅಲಿ ಅವರು ಇಂದು(ಗುರುವಾರ) ನಾಮಪತ್ರ ಸಲ್ಲಿಸಲಿದ್ದಾರೆ.
ಬುಧವಾರ ರಾತ್ರಿ ಕೆಪಿಸಿಸಿ ಕಛೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಪಕ್ಷದ ಬಿ ಫಾರಂ ಪಡೆಡಿರುವ ಇನಾಯತ್ ಅಲಿ, ನಾಮಪತ್ರ ಸಲ್ಲಿಕೆಯ ಮುನ್ನ ಗುರುವಾರ ಮುಕ್ಕ ಚರ್ಚ್, ಬೈಕಂಪಾಡಿಯ ಅಡ್ಕ ದರ್ಗಾ, ಕುದ್ರೋಳಿ ದೇವಸ್ಥಾನ ಸೇರಿದಂತೆ ಸರ್ವ ಧರ್ಮ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ.
ಅನಂತರ ಬೆಳಿಗ್ಗೆ 9.30 ಗಂಟೆಗೆ ಕಾವೂರು ಜಂಕ್ಷನ್'ನಲ್ಲಿ ಬಹಿರಂಗ ಸಭೆ ನಡೆಯಲಿದೆ. ಸಭೆಯ ಬಳಿಕ ಸಹಸ್ರಾರು ಅಭಿಮಾನಿಗಳ ಹಾಗು ಮತದಾರರ ಸಮ್ಮುಖದಲ್ಲಿ ಮೆರವಣಿಗೆಯಲ್ಲಿ ಮಂಗಳೂರು ತಾಲೂಕು ಆಡಳಿತ ಸೌಧಕ್ಕೆ ತೆರಳಿ ಇನಾಯತ್ ಅಲಿ ನಾಮಪತ್ರ ಸಲ್ಲಿಸಲಿದ್ದಾರೆ.