ಹಿಂದೂ ದೇವಾಲಯ ನಿರ್ಮಾಣಕ್ಕಾಗಿ 1.25 ಎಕರೆ ಜಮೀನನ್ನು ದಾನ ಮಾಡಿದ ಮುಸ್ಲಿಂ ಕುಟುಂಬ ! ಭಾರೀ ಸದ್ದು ಮಾಡಿದ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಸುದ್ದಿ
ರಾಮನವಮಿ ಆಚರಣೆ ಬಳಿಕ ಬಿಹಾರದ 2 ಜಿಲ್ಲೆಗಳಲ್ಲಿ ಕೋಮುಗಲಭೆ ನಡೆದಿರುವ ಬೆನ್ನಲ್ಲೇ ಮುಸ್ಲಿಂ ಪ್ರಾಬಲ್ಯ ಇರುವ ಕಿಶನ್‌ಗಂಜ್ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ.
ಶೇ. 70%ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಬಿಹಾರದ ಕಿಶನ್‌ಗಂಜ್ ಜಿಲ್ಲಾ ಕೇಂದ್ರದ ರುಯಿಧಾಸಾ ಪ್ರದೇಶದಲ್ಲಿ ಮುಸ್ಲಿಂ ಕುಟುಂಬವೊಂದು ರಮದಾನ್ ಮಾಸದಲ್ಲಿಯೇ ಹಿಂದೂ ದೇವಾಲಯ ನಿರ್ಮಾಣಕ್ಕಾಗಿ ತಮ್ಮೆಲ್ಲಾ ಭೂಮಿಯನ್ನು ಸಂತೋಷದಿಂದ ದಾನ ಮಾಡುವ ಮೂಲಕ ಗಲಭೆಕೋರರಿಗೆ ಠಕ್ಕರ್ ನೀಡಿದೆ.
ವ್ಯಕ್ತಿಯೊಬ್ಬರ ಅಕಾಲಿಕ ಮರಣದ ನಂತರ, ಅವರ ಇಚ್ಛೆಯಂತೆ 25 ಲಕ್ಷ ರೂ ಮೌಲ್ಯದ ಭೂಮಿಯನ್ನು ಮುಸ್ಲಿಂ ಕುಟುಂಬವೊಂದು ಪವಿತ್ರ ರಂಜಾನ್ ಮಾಸದಲ್ಲಿ ದಾನ ಮಾಡುವ ಮೂಲಕ ಸುದ್ದಿಯಾಗಿದೆ.
ಕಿಶನ್‌ಗಂಜ್‌ನ ಫೈಜ್ ಹಾಗು ಫಜಲ್ ಅಹಮದ್ ಎಂಬವರು ಹನುಮಾನ್ ಮಂದಿರ ನಿರ್ಮಾಣಕ್ಕಾಗಿ ಸ್ಥಳೀಯ ಹಿಂದೂ ಬಾಂಧವರಿಗೆ ತಮ್ಮ ಭೂಮಿಯನ್ನು ದಾನ ಮಾಡಿದ್ದಾರೆ. ಇವರಿಬ್ಬರ ನೇತೃತ್ವದಲ್ಲೇ ದೇವಾಲಯದ ಅಡಿಪಾಯ ಹಾಗು ಪೂಜಾ ಕಾರ್ಯಗಳನ್ನು ನೆರವೇರಿಸಲಾಗಿದೆ.
ವೃತ್ತಿಯಲ್ಲಿ ಇಂಜಿನಿಯರ್‌ಗಳಾಗಿರುವ ಕಿಶನ್‌ಗಂಜ್‌ನ ರೂಯಿಧಾಸಾ ಮೊಹಲ್ಲಾದ ವಾಜಪೇಯಿ ಕಾಲೋನಿ ನಿವಾಸಿಗಳಾದ ಫೈಜ್ ಹಾಗು ಫಜಲ್ ಅಹಮದ್ ಅವರು ಆಂಜನೇಯನ ದೇವಸ್ಥಾನಕ್ಕಾಗಿ 25 ಲಕ್ಷ ರೂಪಾಯಿ ಮೌಲ್ಯದ ತಮ್ಮ 1.25 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಮಾಡಿದ್ದಾರೆ.
ಫೈಜ್ ಹಾಗು ಫಜಲ್ ಅಹ್ಮದ್ ಅವರ ತಂದೆ ಝೈದ್ ಅಹ್ಮದ್ ಅವರು ಈ ಹಿಂದೆ ದೇವಾಲಯ ನಿರ್ಮಾಣಕ್ಕೆ ಜಮೀನು ನೀಡುವುದಾಗಿ ಮಾತು ಕೊಟ್ಟಿದ್ದರು. ಅದನ್ನು ಅವರ ಮಕ್ಕಳಾದ ನಾವು ಈಡೇರಿಸಿದ್ದೇವೆ ಎಂದು ಫೈಜ್ ಹಾಗು ಫಜಲ್ ಹೇಳಿದ್ದಾರೆ.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಝೈದ್ ಸ್ವಲ್ಪ ಜಮೀನಿನನ್ನು ಈ ಹಿಂದೆ ಮಾರಾಟ ಮಾಡಿದ್ದರು. ಇದೀಗ ಇದ್ದ ಜಮೀನನ್ನು ಅಣ್ಣ-ತಮ್ಮಂದಿರಿಬ್ಬರು ತಂದೆಯ ಮಾತನ್ನು ಈಡೇರಿಸಲು ದೇವಾಲಯಕ್ಕೆ ದಾನ ಮಾಡಿದ್ದಾರೆ.