ರೌಡಿ ಶೀಟರ್ ಫಯಾಜ್ ಚೌಟಿ ಜೊತೆ ವಿಧಾನಸಭಾಧ್ಯಕ್ಷ ಕಾಗೇರಿ ಸಭೆ: ಫೋಟೋ ವೈರಲ್
Friday, April 7, 2023
ಶಿರಸಿ: ರೌಡಿ ಶೀಟರ್ ಫಯಾಜ್ ಚೌಟಿ ಹಾಗು ಆತನ ಬೆಂಬಲಿಗರೊಂದಿಗೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ಇತ್ತೀಚಿಗೆ ಸಭೆ ನಡೆಸಿರುವ ಫೋಟೋವೊಂದು ವೈರಲ್ ಆಗುತ್ತಿದೆ.
ದರೋಡೆ, ಬ್ಲಾಕ್ ಮೇಲ್, ಅಪಹರಣ ಸೇರಿದಂತೆ ಹಲವು ಪ್ರಕರಣದ ಆರೋಪಿಯಾಗಿರುವ ರೌಡಿ ಶೀಟರ್ ಫಯಾಜ್ ಚೌಟಿ, ಭೂಗತ ಪಾತಕಿ ಹೆಬ್ಬೆಟ್ಟು ಮಂಜ ಸೇರಿದಂತೆ ಅನೇಕರೊಂದಿಗೆ ಸಂಪರ್ಕದಲ್ಲಿದ್ದು, ಕಳೆದ 5 ದಿನಗಳ ಹಿಂದೆ ಚೌಟಿ ಸ್ಪೀಕರ್ ಕಾಗೇರಿ ಪಕ್ಕದಲ್ಲೇ ಕುಳಿತು ಸಭೆ ನಡೆಸಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಾಗೇರಿ ಅಕ್ಕಪಕ್ಕದಲ್ಲಿಯೇ ಕುಳಿತು ಚೌಟಿ ಸಭೆ ನಡೆಸಿರುವುದು ಕ್ಷೇತ್ರದ ಜನರಲ್ಲಿ ತೀವ್ರ ಅಚ್ಚರಿ ಮೂಡಿಸಿದ್ದು, ಈ ಫೋಟೋ ಈಗ ವೈರಲ್ ಆಗಿದೆ.
ಈ ಸಭೆಯ 2 ದಿನದ ನಂತರ ಹಂದಿ ಅಣ್ಣಿ ಕೊಲೆ ಆರೋಪಿಗಳನ್ನು ತನ್ನ ಆಂಬ್ಯುಲೆನ್ಸ್ ನಲ್ಲಿ ಎಸ್ಕೆಪ್ ಮಾಡಿಸಿದ ಆರೋಪದಡಿ 2 ದಿನಗಳ ಹಿಂದೆಯಷ್ಟೇ ದಾವಣಗೆರೆ ಪೊಲೀಸರಿಂದ ಬಂಧನವಾಗಿದೆ ಎಂದು ಹೇಳಲಾಗಿದೆ.