ಉಚ್ಚಿಲ ತವಕ್ಕಲ್ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ವತಿಯಿಂದ ಸಮಾಜಸೇವಕ ಆಸೀಫ್ ವೈಸಿಗೆ ಸನ್ಮಾನ
ಉಚ್ಚಿಲ: ತವಕ್ಕಲ್ ಓವರ್ಸಿಸ್ ಹಾಗು ತವಕ್ಕಲ್ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ಜಂಟಿ ಆಶ್ರಯದಲ್ಲಿ ಸಾಮಾಜಿಕ ಕಾರ್ಯಕರ್ತ, ಉಚ್ಚಿಲ ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ಆಸೀಫ್ YC ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಆಸೀಫ್ YC, ಕೊರೋನಾ ಸಂದರ್ಭದಲ್ಲಿ ನೀಡಿರುವ ಸೇವೆ ಪ್ರಶಂಸನಾರ್ಹ. ಊಟ, ನಿದ್ರೆ ಬಿಟ್ಟು ಹಗಲು ರಾತ್ರಿ ಎನ್ನದೇ ಕೊರೋನಾ ಪೀಡಿತರ ಮನೆ ಮನೆಗೆ ತೆರಳಿ ಅವರ ಆರೈಕೆ ಮಾಡುತ್ತಾ, ಅವರಿಗೆ ಬೇಕಾದಂಥ ಸಿಲಿಂಡರ್ ವ್ಯವಸ್ಥೆಯನ್ನು ಕಲ್ಪಿಸುವ, ಆಸ್ಪತ್ರೆಗೆ ಕರೆದೊಯ್ಯುವ ಕೆಲಸವನ್ನು ತನ್ನ ಜೀವವನ್ನು ಪಣಕ್ಕಿಟ್ಟು ನೂರಾರು ಮಂದಿಯನ್ನು ರಕ್ಷಿಸಿರುವ ಅವರ ಸೇವೆ ಇಡೀ ಮಾನವಕುಲಕ್ಕೆ ಮಾದರಿಯಾಗಿದೆ.
ಕೊರೋನ ಸಮಯದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯಹಸ್ತವನ್ನು ನೀಡುವುದರೊಂದಿಗೆ ಕೊರೋನಾ ಪೀಡಿತರನ್ನು ಜಾತಿ ಮತ ಭೇದ ವಿಲ್ಲದೆ, ತನ್ನ ಜೀವದ ಹಂಗು ತೊರೆದು ಆಂಬುಲೆನ್ಸ್ ಮೂಲಕ ಅವರ ಜೀವ ಉಳಿಸುವ ಮಹತ್ತರವಾದ ಕಾರ್ಯ ಮಾಡಿದ್ದು, ಕೊರೋನಾದಿಂದ ಸಾವಿಗೀಡಾದವರನ್ನು ಸ್ಮಶಾನ, ಖಬರ್ಸ್ತಾನಗಳಿಗೆ ಸಾಗಿಸುವ ಮೂಲಕ ನೀಡಿರುವ ಅವಿಸ್ಮರಣೀಯ ಸೇವೆಯನ್ನು ಗುರುತಿಸುವ ಜೊತೆಗೆ ಅಫಘಾತ ಸಂದರ್ಭಗಳಲ್ಲಿ ಗಾಯಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುತ್ತ ಸಮಾಜಮುಖಿ ಕಾರ್ಯ ಮಾಡುತ್ತಿರುವುದನ್ನು ಗುರುತಿಸಿ ತವಕ್ಕಲ್ ಓವರ್ಸಿಸ್ ಹಾಗು ತವಕ್ಕಲ್ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಉಚ್ಚಿಲ ಅವರನ್ನು ಸನ್ಮಾನಿಸಿದೆ.
ಉಚ್ಚಿಲ ತವಕ್ಕಲ್ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಝಕ್ ಮೋನಬ್ಬ, ಉಪಾಧ್ಯಕ್ಷ ಶಫಿ AK ಕುಂಜೂರ್, ಗೌರವಾಧ್ಯಕ್ಷ ಹರ್ಷ್ ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕುಚ್ಚಿಕಾಡ್, ಜೊತೆ ಕಾರ್ಯದರ್ಶಿ ಮನ್ಸೂರ್ ಮುಳ್ಳಗುಡ್ಡೆ, ಕೋಶಾಧಿಕಾರಿ ಅಹ್ಮದ್ ಗುಲಾಮ್ ಉಚ್ಚಿಲ ಸೇರಿದಂತೆ ಇತರರ ಸಮ್ಮುಖದಲ್ಲಿ ಆಸಿಫ್ ಅವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಬ್ದುಲ್ ರಝಕ್ ವೈ ಎಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.