
ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ; 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ; 12 ಕ್ಷೇತ್ರಗಳ ಟಿಕೆಟ್ ಬಾಕಿ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದ್ದು, 7 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.
23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿರುವ ಬಿಜೆಪಿ, 12 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿದೆ. 2ನೇ ಪಟ್ಟಿಯಲ್ಲೂ ಮೈಸೂರಿನ ಕೆಆರ್ ಕ್ಷೇತ್ರದ ಟಿಕೆಟ್ ಘೋಷಣೆಯಾಗಿಲ್ಲ, ಇದು ಹಾಲಿ ಶಾಸಕ ಎಸ್ಎ ರಾಮದಾಸ್ ಪ್ರತಿನಿಧಿಸುವ ಕ್ಷೇತ್ರವಾಗಿದೆ. 2ನೇ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಹೆಸರು ಘೋಷಣೆಯಾಗಿಲ್ಲ. ಇಂದಷ್ಟೇ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದರು.
ಮಂಗಳವಾರ ರಾತ್ರಿಯಷ್ಟೇ 189 ಕ್ಷೇತ್ರಗಳನ್ನು ಒಳಗೊಂಡ BJP ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಸದ್ಯ 2ನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಘೋಷಣೆ ಮಾಡಲಾಗಿದ್ದು, ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ಕೈ ತಪ್ಪಿದೆ.
ಯಾವ ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್; ಇಲ್ಲಿದೆ ನೋಡಿ...
ದೇವರಹಿಪ್ಪರಗಿ - ಸೋಮನಗೌಡ ಪಾಟೀಲ್
ಬಸವನ ಬಾಗೇವಾಡಿ - ಎಸ್‌ಕೆ ಬೆಳ್ಳುಬ್ಬಿ
ಇಂಡಿ - ಕಾಸಾಗೌಡ ಬಿರಾದಾರ್
ಕರಮಿಟ್‌ಕಲ್ - ಲಲಿತಾ ಆನಾಪುರ
ಬೀದರ್ -ಈಶ್ವರ್ ಸಿಂಗ್ ಠಾಕೂರ್
ಬಾಲ್ಕಿ -ಪ್ರಕಾಶ್ ಖಾಂಡ್ರೆ
ಗಂಗಾವತಿ - ಪರಣ್ಣ ಮುನ್ನಾವಾಲಿ
ಕಲಗಟಗಿ - ನಾಗರಾಜ್ ಚಬ್ಬಿ
ಹಾನಗಲ್ - ಶಿವರಾಜ್ ಸಜ್ಜನರ್
ಹಾವೇರಿ - ಗವಿಸಿದ್ಧಪ್ಪ ದ್ಯಾಮಣ್ಣನವರ್
ಹರಪನಹಳ್ಳಿ - ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ - ಲೋಕಿಕೆರೆ ನಾಗರಾಜ್
ದಾವಣಗೆರೆ ದಕ್ಷೀನ -ಅಜೇಯ್ ಕುಮಾರ್
ಮಾಯಕೊಂಡ - ಬಸವರಾಜ್ ನಾಯ್ಕ್
ಚನ್ನಗಿರಿ -ಶಿವಕುಮಾರ್
ಬೈಂದೂರ್ - ಗುರುರಾಜ್ ಗಂಟಿಹೊಳೆ
ಮೂಡಿಗೆರೆ -ದೀಪಕ್ ದೊಡ್ಡಯ್ಯ
ಗುಬ್ಬಿ -ದಿಲೀಪ್ ಕುಮಾರ್
ಶಿಡ್ಲಘಟ್ಟ - ರಾಮಚಂದ್ರಗೌಡ
ಕೆಜಿಎಫ್ - ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ -ಚಿದಾನಂದ
ಅರಸೀಕೆರೆ -ಜಿವಿ ಬಸವರಾಜ್
ಎಚ್‌ಡಿ ಕೋಟೆ - ಕೃಷ್ಣನಾಯ್ಕ್