ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟ; ರಾಮದಾಸ್'ಗಿಲ್ಲ ಟಿಕೆಟ್; ಅರವಿಂದ್ ಲಿಂಬಾವಳಿ ಬದಲಿಗೆ ಪತ್ನಿಗೆ ಟಿಕೆಟ್
ನವದೆಹಲಿ: ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಹಿಂದಿನ 2 ಪಟ್ಟಿಗಳಲ್ಲಿ 212 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದ್ದು, ಈಗ 10 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
ಕೃಷ್ಣರಾಜ ಕ್ಷೇತ್ರದಿಂದ ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿದ್ದು, ಶ್ರೀವತ್ಸ ಎಂಬವರಿಗೆ ಟಿಕೆಟ್ ನೀಡಲಾಗಿದೆ. ಅರವಿಂದ್ ಲಿಂಬಾವಳಿ ಅವರ ಬದಳಿಗೆ ಅವರ ಪತ್ನಿ ಮಂಜುಳ ಅರವಿಂದ್ ಲಿಂಬಾವಳಿ ಅವರಿಗೆ ಮಹದೇವಪುರದಿಂದ ಟಿಕೆಟ್ ಘೋಷಣೆಯಾಗಿದೆ.
ಜಗದೀಶ್ ಶೆಟ್ಟರ್ ಸ್ಪರ್ಧಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಅನ್ನು ಮಹೇಶ್ ತೆಂಗಿನಕಾಯಿಗೆ ನೀಡಲಾಗಿದೆ.
ಮೂರನೇ ಪಟ್ಟಿಯಲ್ಲಿ ಯಾರಿಗೆಲ್ಲ ಬಿಜೆಪಿ ಟಿಕೆಟ್ ನೀಡಲಾಗಿದೆ ನೋಡಿ...
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಮಹೇಶ್ ಟೆಂಗಿನಕಾಯಿ
ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ – ಉಮೇಶ್ ಶೆಟ್ಟಿ
ಬೆಂಗಳೂರಿನ ಹೆಬ್ಬಾಳ ಕ್ಷೇತ್ರ – ಕಟ್ಟಾ ಜಗದೀಶ್
ಮೈಸೂರಿನ ಕೃಷ್ಣರಾಜ ಕ್ಷೇತ್ರ – ಶ್ರೀವತ್ಸ
ಹಗರಿಬೊಮ್ಮನಹಳ್ಳಿ ಕ್ಷೇತ್ರ – ಬಿ.ರಾಮಣ್ಣ
ನಾಗಠಾಣ ಕ್ಷೇತ್ರ – ಸಂಜಯ್ ಐಹೊಳೆ
ಸೇಡಂ ಕ್ಷೇತ್ರ – ರಾಜಕುಮಾರ ಪಾಟೀಲ್ಕೊ
ಕೊಪ್ಪಳ ಕ್ಷೇತ್ರ – ಮಂಜುಳಾ ಅಮರೇಶ್
ರೋಣ ಕ್ಷೇತ್ರ – ಕಳಕಪ್ಪ ಬಂಡಿ
ಮಹದೇವಪುರ – ಮಂಜುಳಾ ಲಿಂಬಾಳಿ