ನನಗೆ ಟಿಕೆಟ್ ಕೈತಪ್ಪಲು, ಬಿಜೆಪಿಯಿಂದ ಹೊರಬರಲು ಬಿ.ಎಲ್ ಸಂತೋಷ್ ಷಡ್ಯಂತ್ರವೇ ಕಾರಣ: ವಾಗ್ದಾಳಿ ನಡೆಸಿದ ಜಗದೀಶ್ ಶೆಟ್ಟರ್
Tuesday, April 18, 2023
ಹುಬ್ಬಳ್ಳಿ: ನನಗೆ ಈ ಬಾರಿ ಟಿಕೆಟ್ ಕೈತಪ್ಪಲು, ನಾನು ಬಿಜೆಪಿ ಬಿಟ್ಟು ಹೊರಬರಲು ಬಿ.ಎಲ್ ಸಂತೋಷ್ ಷಡ್ಯಂತ್ರವೇ ಮೂಲ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಕ್ರೋಶ ಹೊರಹಾಕಿದ್ದಾರೆ.
ಮಂಗನವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಇಂದಿನೆಲ್ಲ ಪರಿಸ್ಥಿತಿಗೆ ಮೂಲ ಕಾರಣ ಬಿ.ಎಲ್ ಸಂತೋಷ್‍ರಾಗಿದ್ದಾರೆ. ಬಿಜೆಪಿಯಲ್ಲಿ ನಾನು ಹಿರಿಯ ನಾಯಕನಾಗಿದ್ದರೂ ನನ್ನನ್ನು ಸೈಡ್‍ಲೈನ್ ಮಾಡಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಲಾಗಿದೆ. ಇದಕ್ಕೆಲ್ಲ ಕಾರಣ ಬಿಎಲ್ ಸಂತೋಷ್ ಕಿಡಿಕಾರಿದರು.
ಬಿ.ಎಲ್ ಸಂತೋಷ್ ಅವರಿಂದಾಗಿಯೇ ಪಕ್ಷದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಲಾಗಿದೆ. ಬಿ.ಎಲ್ ಸಂತೋಷ್ ಅವರಿಂದಾಗಿಯೇ ಇನ್ನು ಪಕ್ಷ ಹೊಡೆದು ಹೋಳಾಗಿದೆ ಎಂದ ಶೆಟ್ಟರ್, ನಮ್ಮಲ್ಲಿ ಪಕ್ಷ ಮುಖ್ಯ, ಆದರೆ ವ್ಯಕ್ತಿ ಮುಖ್ಯ ಅಲ್ಲ ಎನ್ನುವ ಮಾತಿತ್ತು, ಆದರೆ ಬಿಎಲ್ ಸಂತೋಷಗೆ ಪಕ್ಷ ಮುಖ್ಯ ಅಲ್ಲ ವ್ಯಕ್ತಿ ಮುಖ್ಯ ಎಂದು ಗುಡುಗಿದರು.