
ಇಫ್ತಾರ್ ಕೂಟದ ಮೂಲಕ ಭಾವಕ್ಯತೆ ಮೆರೆದ 'ಹೆಮ್ಮೆಯ ದುಬೈ ಕನ್ನಡ ಸಂಘ'
Tuesday, April 18, 2023
ಅಬುಧಾಬಿ: ಮುಂಜಾನೆಯಿಂದ ಸಂಜೆಯವರೆಗೆ ಮುಸ್ಲಿಂ ಭಾಂದವರು ಅನುಸರಿಸುವ ವೃತ ಉಪವಾಸವನ್ನು ಮುರಿಯುವ ಕರ್ಮವಾದ ಇಫ್ತಾರ್ ಪ್ರಕ್ರಿಯೆಯನ್ನು ಹೆಮ್ಮೆಯ ದುಬೈ ಕನ್ನಡ ಸಂಘವು ಸರ್ವ ಧರ್ಮದ ಜನರಿಗೆ ಏರ್ಪಡಿಸಿದ್ದರು.
ಇತ್ತೀಚಿಗೆ 5ರಂದು ಶೇಖ್ ಜಾಯೆದ್ ರಸ್ತೆಯಲ್ಲಿರುವ ಮರಿಯೇಟ್ ಹೋಟೆಲಲ್ಲಿ ನಡೆಯಿತು. ಹೆಮ್ಮೆಯ ದುಬೈ ಕನ್ನಡ ಸಂಘದ ಪದಾಧಿಕಾರಿಗಳು, ಸಲಹಾ ಸಮಿತಿ ಸದಸ್ಯರುಗಳು, ಉಪ ಸಮಿತಿ ಸದಸ್ಯರುಗಳು, ದಸರಾ ಕ್ರೀಡೋತ್ಸವದಲ್ಲಿ ಸ್ವಯಂ ಸೇವಕರಾಗಿ ಸಹಾಯ ಮಾಡುವವರ ಕುಟುಂಬದವರಿಗೆ ಸರ್ವ ಧರ್ಮ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು. ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಿಂದ ಹೆಮ್ಮೆಯ ಕನ್ನಡ ಸಂಘದ ಕುಟುಂಬ ಸದಸ್ಯರು ಸಂತೋಷ ಕೂಟದಲ್ಲಿ ಭಾಗವಹಿಸಿ ಪರಸ್ಪರ ಕುಶಲೋಪಚಾರ ವಿನಿಮಯ ಮಾಡಿಕೊಂಡರು.