
ನಟ ಕಿಚ್ಚ ಸುದೀಪ್- ದರ್ಶನ್ ತೂಗುದೀಪ ಇಂದು ಬಿಜೆಪಿಗೆ ಸೇರ್ಪಡೆ: ವ್ಯಾಪಕವಾಗಿ ಹರಡಿದ ಸುದ್ದಿ: ಸಿಎಂ ಬೊಮ್ಮಾಯಿಯಿಂದ 2 ಪ್ರತ್ಯೇಕ ಸುದ್ದಿಗೋಷ್ಠಿ
ಬೆಂಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ಮಧ್ಯೆ ಕನ್ನಡ ಚಿತ್ರರಂಗದ ಪ್ರಮುಖ ನಟರಾದ ಕಿಚ್ಚ ಸುದೀಪ್ ಹಾಗು ದರ್ಶನ್ ತೂಗುದೀಪ ಇಂದು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ.
ಈ ಹಿಂದೆ ಕಿಚ್ಚ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಈಗ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಇದೀಗ ಬಂದಿರುವ ಹೊಸ ಸುದ್ದಿ ಕಿಚ್ಚ ಸುದೀಪ್ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಾರೆ ಎನ್ನುವುದು. ಇನ್ನು ಅವರ ಒಂದು ಕಾಲದ ಕುಚ್ಚಿಕ್ಕು ಗೆಳೆಯ ನಟ ದರ್ಶನ್ ತೂಗುದೀಪ ಕೂಡ ಇದೇ ವೇಳೆ ಬಿಜೆಪಿಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಈ ಇಬ್ಬರು ನಟರನ್ನು ಬಿಜೆಪಿಗೆ ಕರೆ ತಂದರೆ ಈಗಾಗಲೇ ಆಡಳಿತಾರೂಢ ಬಿಜೆಪಿ ವಿರುದ್ಧ ಜನಾಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನವೂ ಅಡಕವಾಗಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಒಂದರ ಮೇಲೆ ಒಂದು ಸುದ್ದಿ ಗೋಷ್ಠಿ ಕರೆದಿದ್ದು, ಈ ಸುದ್ದಿಗೋಷ್ಠಿಯಲ್ಲಿ ಸುದೀಪ್-ದರ್ಶನ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ.