ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ʼನೋಬಾಲ್ʼ ನೀಡಿದಕ್ಕೆ ಇರಿದು ಕೊಲೆ !
Tuesday, April 4, 2023
ಭುವನೇಶ್ವರ್: ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ʼನೋಬಾಲ್ʼ ನೀಡಿದಕ್ಕೆ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಒಡಿಶಾದ ಕಟಕ್‌ನಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿ ಲಕ್ಕಿ ರಾವುತ್ (22) ಎಂದು ಗುರುತಿಸಲಾಗಿದೆ. ಕ್ರಿಕೆಟ್ ಪಂದ್ಯದ ವೇಳೆ ‘ನೋಬಾಲ್’ ನೀಡಿದ ವಿಚಾರಕ್ಕೆ ಸ್ಮೃತಿ ರಂಜನ್ ರೌತ್ ಎಂಬಾತ ಜಗಳ ತೆಗೆದಿದ್ದು, ನಂತರ ಹರಿತವಾದ ಚಾಕುವಿನಿಂದ ಲಕ್ಕಿ ರಾವುತ್'ನನ್ನ ಇರಿದಿದ್ದಾನೆ.
ಕಟಕ್‌ನಲ್ಲಿ ಬ್ರಹ್ಮಪುರ ಮತ್ತು ಶಂಕರಪುರ ಎಂಬ 2 ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಅಂಪೈರ್ ಲಕ್ಕಿ ರಾವುತ್ ನೋಬಾಲ್ ನೀಡಿದ್ದ. ಈ ವೇಳೆ ಅಂಪೈರ್ ಹಾಗೂ ಆಟಗಾರನ ನಡುವೆ ವಾಗ್ವಾದ ನಡೆದಿದೆ. ನಂತರ ಅಂಪೈರ್‌ಗೆ ಆಟಗಾರ ಚಾಕುವಿನಿಂದ ಇರಿದಿದ್ದು, ಈ ವೇಳೆ ಆರೋಪಿಯನ್ನು ಮೈದಾನದಲ್ಲಿ ಇದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಅಂಪೈರ್‌ನನ್ನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾನೆ.