ಉತ್ತರಪ್ರದೇಶದಲ್ಲಿ ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್, ಸಹೋದರನನ್ನು ಪೊಲೀಸರ, ಮಾಧ್ಯಮದವರ ಎದುರೇ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು: ಮೂವರ ಬಂಧನ

ಉತ್ತರಪ್ರದೇಶದಲ್ಲಿ ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್, ಸಹೋದರನನ್ನು ಪೊಲೀಸರ, ಮಾಧ್ಯಮದವರ ಎದುರೇ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು: ಮೂವರ ಬಂಧನ

ಆಗ್ರಾ : ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ, ಮಾಜಿ ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸದ್​ನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಎನ್​ಕೌಂಟ್ ಮಾಡಿದ ಬೆನ್ನಲ್ಲೇ ಅತೀಕ್ ಅಹ್ಮದ್ ಹಾಗು ಆತನ ಸಹೋದರ ಅಶ್ರಫ್​ನನ್ನ ಮಾಧ್ಯಮದವರು ಹಾಗು ಪೋಲೀಸರ ಸರ್ಪಗಾವಲಿನಲ್ಲಿಯೇ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ.

ವೈದ್ಯಕೀಯ ತಪಾಸಣೆಗೆ ಕೊಂಡೊಯ್ಯುವ ವೇಳೆ ಪ್ರಯಾಗ್​ರಾಜ್ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ 3 ಮಂದಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಪ್ರಕರಣ ಸಂಬಂಧ 3 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಹಂತಕರನ್ನು ಸನ್ನಿ, ಲವಲೇಶ್ ಹಾಗು ಅರುಣ್ ಎಂದು ಗುರುತಿಸಲಾಗಿದೆ. ಬಂಧಿತ ಹಂತಕರು ಮಾಧ್ಯಮದವರಂತೆ ವೇಷ ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪುತ್ರ ಅಸಾದ್ ಅಹ್ಮದ್​ನ ಅಂತ್ಯ ಕ್ರಿಯೆ ಶನಿವಾರ  ಕೆಲವು ಸಂಬಂಧಿಕರು ಮತ್ತು ಸ್ಥಳೀಯರು ಸೇರಿಕೊಂಡು ಖಬರ್ಸ್ತಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ವೇಳೆ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಅತೀಕ್ ಅಹ್ಮದ್ ಅನುಪಸ್ಥಿತಿಯಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬದವರ ಸಮ್ಮುಖದಲ್ಲಿ ನಡೆಸಲಾಗಿದೆ. 

Ads on article

Advertise in articles 1

advertising articles 2

Advertise under the article