ನನಗೆ ಮತ ನೀಡಿ ಗೆಲ್ಲಿಸಿ; ಖಂಡಿತವಾಗಿ ಅಭಿವೃದ್ಧ ಕಾರ್ಯ ಮಾಡುತ್ತೇನೆ: ಕಡೆಕಾರು ಕಟ್ಟೆಗುಡೆ ಕುತ್ಪಾಡಿ ವಾರ್ಡ್ ನಲ್ಲಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್
Sunday, April 30, 2023
ಉಡುಪಿ: ವಿಧಾನ ಸಭಾ ಚುನಾವಣೆ ಪೂರ್ವಭಾವಿಯಾಗಿ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟೆಗುಡೆ ಕುತ್ಪಾಡಿ ವಾರ್ಡ್ ನಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಕಟ್ಟೆಗುಡ್ಡೆ ನೇತೃತ್ವದಲ್ಲಿ ರವಿವಾರ ಮನೆ-ಮನೆ ಭೇಟಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಸಾದ್ ರಾಜ್ ಕಾಂಚನ್, ದಿವಾಕರ ಕುಂದರ್, ವೀಣಾ ಪ್ರಕಾಶ್ ಬಂಗೇರ ಹಿರಿಯರು ಮತ್ತು ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ವೇಳೆ ಮನೆ ಮನೆ ತೆರಳಿದ ಪ್ರಸಾದ್ ರಾಜ್ ಕಾಂಚನ್, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನನಗೆ ಮತದಾರರು ಆಶೀರ್ವದಿಸಿದರೆ ಖಂಡಿತವಾಗಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ನನಗೊಂದು ಮತ ನೀಡಿ ನನ್ನ ಗೆಲುವಿಗೆ ಸಹಕರಿಸಿ ಎಂದು ಕಾಂಚನ್ ಮತಯಾಚಿಸಿದರು.