ಲಂಚದ ಪರಮಾವಧಿಯ ಸರ್ಕಾರವನ್ನು ಕಿತ್ತೊಗೆಯಿರಿ: ಮನೆಮನೆ ಮತಯಾಚನೆಯಲ್ಲಿ ವಿನಯ ಕುಮಾರ್ ಸೊರಕೆ
ಕಾಪು: ಕಾಪುವಿನ ಇಂದಿನ ಅಗತ್ಯತೆ ಜಾತಿ ಧರ್ಮ ಅಲ್ಲ. ಅತಿಯಾದ ಬೆಲೆ ಏರಿಕೆಯಿಂದ ಜನತೆ ರೋಸಿ ಹೋಗಿದ್ದಾರೆ. ಉದ್ಯೋಗವಿಲ್ಲದೆ ಯುವ ಜನತೆ ಲಂಚದ ಪರಮಾವಧಿಯಿಂದ ಬೇಸತ್ತು ಹೋಗಿದ್ದಾರೆ ಎಂದು ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ಕ್ಷೇತ್ರದ ಹಿರೇಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆ ಮತಯಾಚನೆ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ.. ಆಡಳಿತ ವಿರೋಧಿ ಅಲೆ ಜನರಲ್ಲಿ ಎದ್ದು ಕಾಣ್ತಾ ಇದೆ. ಜನತೆ ಬದಲಾವಣೆಯನ್ನು ಬಯಸಿದೆ. ಕಾಪುವಿನ ತಳಮಟ್ಟದ ಜನತೆಯಲ್ಲಿ ಇದು ಮನೆ ಮಾತಾಗಿದೆ.40 ವರ್ಷಗಳ ಕಾಲ ರಾಜಕೀಯ ಬದುಕಿನಲ್ಲಿ ನಾನು ಬಹಳಷ್ಟನ್ನ ಅನುಭವಿಸಿದ್ದೇನೆ. ಶಾಸಕನಾಗಿ, ಪಾರ್ಲಿಮೆಂಟ್ ಸದಸ್ಯನಾಗಿ , ಮಂತ್ರಿಯಾಗಿ ದುಡಿದ ಸಂತೋಷವೂ ಇದೆ. ಅನುಭವವೂ ಇದೆ. ಇದುವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದ ನನಗೆ ಅದೇ ನನ್ನ ಮನೆ. ಈ ಬಾರಿ ನನ್ನನ್ನು ಆಯ್ಕೆಮಾಡಿ 5 ವರ್ಷ ಜನ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟರೆ ಕಾಪು ಕ್ಷೇತ್ರ ವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಷ್ಟು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಅಂತಾ ಸೊರಕೆ ಅಭಿಪ್ರಾಯ ಪಟ್ಟರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ನಾರಾಯಣ ಮದಗ, ಇಸ್ಮಾಯಿಲ್, ಸುಲೇಮಾನ್, ರಮೇಶ್, ಸುರೇಖ, ಆಶಾ, ಸುಗುಣ, ರಾಜೇಶ್ವರಿ, ಕ್ರಷ್ಣ, ಆನಂದ, ಸುಧಾಕರ, ಸಂಜೀವ ಮದಗ, ಉಮ್ಮರ್ ಅಲಿ, ದಾನೇಶ್, ಶಾಹೀದ್, ಸುಹೈಬ್ ಉಪಸ್ಥಿತರಿದ್ದರು