ಡಿಗ್ರಿ ಇಲ್ಲ ಅಂತಾ ರೈತರ ಹಾಲು ಹಿಂದಕ್ಕೆ, ಕೆಎಂಎಫ್ ಖಾಸಗೀಕಣದ ಹುನ್ನಾರ: ದೇವಿ ಪ್ರಸಾದ್ ಶೆಟ್ಟಿ ಅಕ್ರೋಶ

ಡಿಗ್ರಿ ಇಲ್ಲ ಅಂತಾ ರೈತರ ಹಾಲು ಹಿಂದಕ್ಕೆ, ಕೆಎಂಎಫ್ ಖಾಸಗೀಕಣದ ಹುನ್ನಾರ: ದೇವಿ ಪ್ರಸಾದ್ ಶೆಟ್ಟಿ ಅಕ್ರೋಶ

ಕಾಪು:  ಡಿಗ್ರಿ ಇಲ್ಲ ಅಂತಾ ಪ್ರತೀ ಮನೆಯ ರೈತರ ಹಾಲನ್ನು ಡೈರಿಯಿಂದ ಹಿಂದಕ್ಕೆ ಕಳುಹಿಸಲಾಗುತ್ತಿದೆ ಎಂದು ಕಾಪು ಕಾಂಗ್ರೆಸ್ ಮುಖಂಡ ದೇವಿ ಪ್ರಸಾದ್ ಶೆಟ್ಟಿ  ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಪು ರಾಜೀವ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ  ಹೈನುಗಾರಿಕಾ ಉತ್ತೇಜನ‌ ನೀಡಲು‌ ಕೆ ಎಂ ಶುರು ಮಾಡಲಾಗಿದೆ. ಇದೀಗ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯ ಸರ್ಕಾರ  ಕೆ ಎಂ‌ಎಫ್ ಖಾಸಗೀಕರಣ ಮಾಡುವ ಹುನ್ನಾರ ನಡೆಸಲಾಗುತ್ತಿದೆ.ಜಿಲ್ಲೆಯಲ್ಲಿ 

ಪ್ರಾಥಮಿಕ‌ ಸಂಘದ  ರೈತರ ಹಾಲು ಸಂಗ್ರಹಿಸಲಾಗುತ್ತಿದ್ದು ರೈತರು ಮನೆ ಮನೆಯಿಂದ ಸಂಗ್ರಹಿಸಿ ತರುವ ಹಾಲಿನಲ್ಲಿ  ಡಿಗ್ರಿ ಇಲ್ಲ ಅಂತಾ ಡೈರಿಯಲ್ಲಿ  ಹಿಂದಕ್ಕೆ ಕಳುಹಿಸಲಾಗುತ್ತಿದೆ.ಈ ವ್ಯವಸ್ಥೆ ಯಲ್ಲಿ ಭಾರೀ ಷಡ್ಯಂತ್ರ  ನಡೆಸಲಾಗುತ್ತಿದೆ.ಕೆ ಎಂ ಎಫ್ ನ್ನು ಬಂದ್ ಮಾಡಿ ಅಮುಲ್ ಪರಿಚಿಯಿಸುವ  ಹುನ್ನಾರ ನಡೆಸಲಾಗುತ್ತಿದೆ. ರೈತಾಪಿ ಜನರ ಜೀವನಾಡಿ ಕೆ ಎಂ ಎಫ್ ಬಂದ್  ಮಾಡಿ ಅಮುಲ್ ಪರಿಚಯಿಸುವ ಖಾಸಗೀಕರಣ ವ್ಯವಸ್ಥೆ ಯನ್ನು ಮುಂದುವರಿಸಿದರೆ ಕಾಂಗ್ರೆಸ್ ಕಾರ್ಯಕರ್ತರು  ಕೆ ಎಂ ಎಫ್ ಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಿದ್ದಾರೆ. ಹಾಲನ್ನು ಡಿಗ್ರಿ ಇಲ್ಲ ಅಂತಾ ಹಿಂದಕ್ಕೆ ಕಳುಹಿಸಿ

ರೈತರ ಜೀವನಕ್ಕೆ ಧಕ್ಕೆ ತಂದರೆ ಇದಕ್ಕೆ ತಕ್ಕ ಶಾಸ್ತಿ ಮಾಡಿ ಉಗ್ರ ಹೋರಾಟ ಸಂಘಟಿಸಲಾಗುವುದು ಅಂತಾ ದೇವಿಪ್ರಸಾದ್ ಶೆಟ್ಟಿ ಎಚ್ಚರಿಸಿದ್ದಾರೆ. ಕೆ ಎಂ ಎಪೊ್ ಬಂದ್ ಮಾಡಿ ಅಮುಲ್ ನ್ನು ಪ್ರೋತ್ಸಾಹಿಸಿದರೆ ಅಮುಲ್  ನ್ನು ರಾಜ್ಯದಿಂದ‌ ಓಡಿಸಲಾಗುವುದು ಅಂತಾ ಕಾಂಗ್ರೆಸ್ ಮುಖಂಡ ದೇವಿ ಪ್ರಸಾದ್ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರಾದ

ನವೀನ್‌ಚಂದ್ರ ಸುವರ್ಣ, ದೇವಿಪ್ರಸಾದ್ ಶೆಟ್ಟಿ, ಮಾಧವ ಆರ್. ಪಾಲನ್, ಪ್ರಶಾಂತ್ ಜತ್ತನ್ನ, ಶರ್ಪುದ್ದೀನ್ ಶೇಖ್, ಅಮೀರ್ ಕಾಪು, ದೇವರಾಜ್ ಕೋಟ್ಯಾನ್, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article