ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಕೌಶಿಕ್-ಸುರಭಿ; ಕಲಾ ವಿಭಾಗದಲ್ಲಿ ಬೆಂಗಳೂರಿನ ತಬಸ್ಸುಮ್ ಶೇಖ್; ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯಾ ರಾಜ್ಯಕ್ಕೆ ಪ್ರಥಮ

ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಕೌಶಿಕ್-ಸುರಭಿ; ಕಲಾ ವಿಭಾಗದಲ್ಲಿ ಬೆಂಗಳೂರಿನ ತಬಸ್ಸುಮ್ ಶೇಖ್; ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯಾ ರಾಜ್ಯಕ್ಕೆ ಪ್ರಥಮ

ಬೆಂಗಳೂರು: ಈ ವರ್ಷ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ-ವಾಣಿಜ್ಯ-ಕಲಾ ವಿಭಾಗದಲ್ಲಿ ಹಲವು ವಿದ್ಯಾರ್ಥಿಗಳು ಪ್ರಥಮ ಸ್ಥಾನ ತಂದು ಕೊಡುವ ಮೂಲಕ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಎಸ್‌ಎಮ್ ಕೌಶಿಕ್(ಗಂಗೋತ್ರಿ ಪಿಯು ಕಾಲೇಜು ಶ್ರೀನಿವಾಸಪುರ, ಕೋಲಾರ ಜಿಲ್ಲೆ) ಹಾಗು ಸುರಭಿ ಎಸ್(ಆರ್‌ವಿ ಪಿಯು ಕಾಲೇಜು ಎನ್‌ಎಮ್‌ಕೆಆರ್‌ವಿ ಕ್ಯಾಂಪಸ್ 3ನೇ ಬ್ಲಾಕ್ ಜಯನಗರ, ಬೆಂಗಳೂರು)  ಇಬ್ಬರು ವಿದ್ಯಾರ್ಥಿಗಳು 596 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ರ‍್ಯಾಂಕ್ ಅನ್ನು ಗಿಟ್ಟಿಸಿಕೊಂಡಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅನನ್ಯಾ ಕೆ. ಎ 600 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಬೆಂಗಳೂರಿನ ತಬಸ್ಸುಮ್ ಶೇಖ್ (ಎನ್‍ಎಂಕೆಆರ್‌ವಿ ಮಹಿಳಾ ಕಾಲೇಜು, ಜಯನಗರ, ಬೆಂಗಳೂರು) 593 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಈ ಬಾರಿ ರಾಜ್ಯದಲ್ಲಿ ವಿಜ್ಞಾನ ವಿಭಾದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಪಟ್ಟಿ ಹೀಗಿದೆ....

595 ಅಂಕ ಪಡೆದ ವಿದ್ಯಾರ್ಥಿಗಳು:

ಕಟ್ಟೋಜು ಜಯಿಶಿಕ – ಆರ್‌ವಿ ಪಿಯು ಕಾಲೇಜು ಎನ್‌ಎಮ್‌ಕೆಆರ್‌ವಿ ಕ್ಯಾಂಪಸ್ 3ನೇ ಬ್ಲಾಕ್ ಜಯನಗರ, ಬೆಂಗಳೂರು

ಸಾತ್ವಿಕ್ ಪದ್ಮನಾಭ ಭಟ್ – ಮಹಾತ್ಮಗಾಂಧಿ ಮೆಮೋರಿಯಲ್ ಪಿಯು ಕಾಲೇಜು, ಉಡುಪಿ

ಜೆಸ್ವಿತ ದಿಯಾಸ್ – ಪೂರ್ಣಪ್ರಜ್ಞಾ ಪಿಯು ಕಾಲೇಜು, ಉಡುಪಿ


594 ಅಂಕ ಪಡೆದ ವಿದ್ಯಾರ್ಥಿಗಳು:

ಹರ್ಷಿತ ಆರ್ – ನಾರಾಯಣ ಪಿಯು ಕಾಲೇಜು, ಬೆಂಗಳೂರು

ನೇಹಾ ರಾವ್ – ಶ್ರೀ ವೆಂಕಟರಮಣ ಪಿಯು ಕಾಲೇಜು, ಕುಂದಾಪುರ, ಉಡುಪಿ

ಅದಿತಿ ಆರ್ – ಎನ್‌ಎಮ್‌ಕೆಆರ್‌ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು

ರುಚಿತಾ ಎಂ – ಸರ್ವೋದಯ ಪಿಯು ಕಾಲೇಜು, ತುಮಕೂರು

ಸಮಯ ಸದಾನಂದ ಮಬೆನ್ – ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ

ಯೋಗೇಶ್ ತುಕರಾಮ್ ಬಡಚಿ – ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು ದಕ್ಷಿಣ ಕನ್ನಡ ಜಿಲ್ಲೆ

ರಜತ ಎಂ ಹೆಗಡೆ – ಎಂಇಎಸ್ ಚೈತನ್ಯ ಪಿಯು ಕಾಲೇಜು, ಉತ್ತರ ಕನ್ನಡ ಜಿಲ್ಲೆ

ಸಿರಿ ಆರ್ ಆಚಾರ್ಯ – ಆರ್‌ವಿ ಪಿಯು ಕಾಲೇಜು, ಎನ್‌ಎಮ್‌ಕೆಆರ್‌ವಿ ಕ್ಯಾಂಪಸ್ 3ನೇ ಬ್ಲಾಕ್ ಜಯನಗರ, ಬೆಂಗಳೂರು

ಪ್ರಚಿತ ಎಂ – ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ


ವಾಣಿಜ್ಯ (Commerce) ವಿಭಾಗದಲ್ಲಿ 596 ಅಂಕ ಪಡೆದ ವಿದ್ಯಾರ್ಥಿಗಳು:

ಅನ್ವಿತಾ ಡಿ.ಎನ್‌, 596 ಅಂಕ, ವಿಕಾಸ್ ಕಂಪ್ ಪಿಯು ಕಾಲೇಜು ಶಿವಮೊಗ್ಗ

ಛಾಯಾ ರವಿ ಕುಮಾರ್‌, 596 ಅಂಕ, ಟ್ರಾನ್ಸೆಂಡ್ ಪಿಯು ಕಾಲೇಜು, ಜಯನಗರ ಬೆಂಗಳೂರು

ಖುಷಿ ಬಾಗಲಕೋಟ್‌, 596 ಅಂಕ, ಎಕ್ಸ್‌ಲೆಂಟ್‌ ಪಿಯು ಕಾಲೇಜು ಮೂಡುಬಿದಿರೆ

ಸ್ವಾತಿ ಪೈ 596 ಅಂಕ, ವಿಕಾಸ್‌ ಪಿಯು ಕಾಲೇಜು ಮಂಗಳೂರು

ಧನ್ಯಶ್ರೀ ರಾವ್‌, 596 ಅಂಕ, ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು

ವರ್ಷಾ ಸತ್ಯನಾರಾಯಣ್‌, 596 ಅಂಕ, ಟ್ರಾನ್ಸೆಂಡ್ ಪಿಯು ಕಾಲೇಜು ಜಯನಗರ, ಬೆಂಗಳೂರು

ಕೆ. ದಿಶಾ ರಾವ್‌, 596 ಅಂಕ, ಆಳ್ವಾಸ್ ಕಾಲೇಜ್‌ ಮೂಡುಬಿದಿರೆ

ಇಂಚರಾ ಎನ್‌, 596 ಅಂಕ, ಎಎಸ್‌ಸಿ ಪಿಯು ಕಾಲೇಜ್‌, ಬೆಂಗಳೂರು

ಗಾನ ಐ 596 ಅಂಕ ಕ್ರೈಸ್ಟ್ ಪಿಯು ಕಾಲೇಜ್‌, ಬೆಂಗಳೂರು.


ಕಲಾ ವಿಭಾಗದಲ್ಲಿ 592 ಅಂಕ ಗಳಿಸಿರುವ ವಿದ್ಯಾರ್ಥಿಗಳು 

ಕುಶನಾಯ್ಕ್ ಜಿ.ಎಲ್, ಇಂದು ಇನೋವೇಟಿವ್ ಪಿಯು ಕಾಲೇಜ್, ಬಳ್ಳಾರಿ.

ದದ್ದಿ ಕರಿಬಸಮ್ಮ, ಇಂದು ಐಎನ್‍ಡಿಪಿ ಪಿಯು ಕಾಲೇಜ್, ಬಳ್ಳಾರಿ.

ಮುತ್ತೂರು ಮಲ್ಲಮ್ಮ, ಎಸ್‍ಯುಜೆಎಂ ಪಿಯು ಕಾಲೇಜ್, ಹರಪನಹಳ್ಳಿ, ಬಳ್ಳಾರಿ.

ಪ್ರಿಯಾಂಕ ಕುಲಕರ್ಣಿ, ಲಿಂಗರಾಜ ಕಲಾ ಹಾಗೂ ವಾಣಿಜ್ಯ ಪಿಯು ಕಾಲೇಜ್, ಬೆಳಗಾವಿ.

ರಾಹುಲ್ ಮೋತಿಲಾಲ್ ರಾಥೋಡ್ , ಎಸ್‍ಕೆ ಪಿಯು ಕಾಲೇಜ್ ತಾಳಿಕೋಟೆ ಮುದ್ದೆಬಿಹಾಳ, ವಿಜಯಪುರ.

591 ಅಂಕ(ಕಲಾ ವಿಭಾಗ)

ಸಹನ ಉಲ್ಲಾವಪ್ಪ ಕಡಕೋಳ್, ಸರ್ಕಾರಿ ಪಿಯು ಕಾಲೇಜ್, ಬೈಲಹೊಂಗಲ, ಬೆಳಗಾವಿ.

ಕೆ. ಕೃಷ್ಣ, ಇಂದು ಐಎನ್‍ಡಿಪಿ ಪಿಯು ಕಾಲೇಜ್ ಕೊಟ್ಟೂರು ಕೂಡ್ಲಿಗಿ, ಬಳ್ಳಾರಿ.

ಭಾಗಪ್ಪ, ಜ್ಞಾನಭಾರತಿ ಪಿಯು ಕಾಲೇಜ್, ಬಸವನಗರ, ಸಿಂದಗಿ, ವಿಜಯಪುರ.

ಮಂಜುಶ್ರೀ, ವಿವೇಕಾನಂದ ಪಿಯು ಕಾಲೇಜ್ ನೆಹರು ನಗರ ಪುತ್ತೂರು, ದಕ್ಷಿಣ ಕನ್ನಡ.


Ads on article

Advertise in articles 1

advertising articles 2

Advertise under the article