ವಿಧಾನಸಭಾ ಚುನಾವಣೆ: ಕಾಪು ಕ್ಷೇತ್ರ SDPI ಅಭ್ಯರ್ಥಿ ಹನೀಫ್ ಮೂಳೂರುಗೆ ಪಕ್ಷದ ಬಿ ಫಾರಂ ನೀಡಿದ ಶಾಹಿದ್ ಅಲಿ
Tuesday, April 11, 2023
ಕಾಪು: ಈ ಬಾರಿಯ ಕಾಪು ವಿಧಾನಸಭಾ ಕ್ಷೇತ್ರ ಚುನಾವಣೆಯ SDPI ಅಭ್ಯರ್ಥಿ ಹನೀಫ್ ಮೂಳೂರು ಅವರಿಗೆ ಪಕ್ಷದ ಬಿ ಫಾರಂನ್ನು SDPI ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹನೀಫ್ ಮೂಳೂರು, ಈ ಚುನಾವಣೆಯಲ್ಲಿ ನಾನು ಗೆಲ್ಲಲಿ ಅಥವಾ ಸೋಲಲಿ ಸದಾ ಜನರ ಸೇವೆ ಮಾಡಲು ಸಿದ್ಧನಾಗಿದ್ದೇನೆ ಹಾಗೂ ನನ್ನನ್ನು ಶೋಷಿತ, ದಮನಿತ ವರ್ಗಗಳಿಗೆ ಹೋರಾಟ ಮಾಡಲು ಧ್ವನಿ ಎತ್ತಲು ಅವಕಾಶ ನೀಡಿದ ನಮ್ಮ ಪಕ್ಷದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.
ನನ್ನ ನಾಯಕರು ನನ್ನ ಮೇಲೆ ಭರವಸೆ ಇಟ್ಟಿದ್ದು, ಆ ಭರವಸೆ ಉಳಿಸಲು ಸದಾ ನನ್ನ ಉಸಿರು ಇರುವವರಿಗೆ ಸಿದ್ಧನಾಗಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ಉಸ್ತುವಾರಿ ರಝಾಕ್ ವೈ ಎಸ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಖಲೀಲ್ ಉಡುಪಿ, ಕಾಪು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಮೊಹಿದ್ದೀನ್ ಬೆಳಪು, ಉಸ್ತುವಾರಿ ಅಬ್ದುಲ್ಲಾ ಮಲಾರ್, ಕಾಪು SDPI ಪುರಸಭೆ ಸದಸ್ಯರಾದ ನೂರುದ್ದಿನ್, ಜಲಾಲ್ ಕೊಂಬ್ಬಗುಡ್ಡೆ ಕಾರ್ಯಕರ್ತರು ಉಪಸ್ಥಿತರಿದ್ದರು.