
100ಕ್ಕೆ 100 ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದ ಮಂಜುನಾಥನ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ ಜಗದೀಶ್ ಶೆಟ್ಟರ್
Friday, April 28, 2023
ಹುಬ್ಬಳ್ಳಿ: ಈ ಬಾರಿ ಜಗದೀಶ್ ಶೆಟ್ಟರ್ 100ಕ್ಕೆ 100 ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದ ಯುವಕ ಮಂಜುನಾಥನ ನಿವಾಸಕ್ಕೆ ಶುಕ್ರವಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ಕೃತಜ್ಞತೆ ಸಲ್ಲಿಸಿದರು.
ಶೆಟ್ಟರ್ ಗೆಲ್ಲುವುದಿಲ್ಲ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದಕ್ಕೆ ಪ್ರತಿಯಾಗಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತ ಮಂಜುನಾಥ ಎನ್ನುವ ಯುವಕ 100ಕ್ಕೆ 100 ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದು ತಿರುಗೇಟು ನೀಡಿದ್ದ.
ಇದನ್ನು ಗಮನಿಸಿದ ಶೆಟ್ಟರ್ ಅವರು ಮಂಜುನಾಥನ ಮನೆಗೆ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದು, ತಮ್ಮ ಗೆಲುವಿಗಾಗಿ ರಕ್ತದಲ್ಲಿ ಶುಭ ಹಾರೈಸಿದ ಮಂಜುನಾಥನಿಗೆ ಸನ್ಮಾನಿಸಿ ಕೃತಜ್ಞತೆ ತಿಳಿಸಿದರು.