ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾವಣೆ ಮಾಡೋ ದುಷ್ಟ ಕೆಲಸಕ್ಕೆ ಕೈ ಹಾಕಿದ ಬಿಜೆಪಿಯವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ: ಸೊರಕೆ
ಅಮಿತ್ ಷಾ ಉದ್ಯಮಪ್ರಿಯ ರಾಜಕಾರಣಿ, ಅವರನ್ನು ರಾಜ್ಯ ಯಾವತ್ತು ಒಪ್ಪಿಕೊಂಡಿಲ್ಲ
ಉಡುಪಿ: ಅಮಿತ್ ಷಾ ವ್ಯವಹಾರ ಮತ್ತು ಉದ್ಯಮಪ್ರಿಯ ರಾಜಕಾರಣಿ, ಅವರನ್ನು ರಾಜ್ಯದ ಜನತೆ ಯಾವತ್ತು ಒಪ್ಪಿಕೊಂಡಿಲ್ಲ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಕಾಪು ಕ್ಷೇತ್ರದ ಮಟ್ಟುವಿನಲ್ಲಿ ಮನೆ ಮನೆ ಮತಪ್ರಚಾರದಲ್ಲಿ ಮಾತನಾಡಿದರು.
ದಿಲ್ಲಿಯ ಬಿಜೆಪಿ ನಾಯಕರು ದಲಿತ ಜನಾಂಗದ ಪರಮೋಚ್ಛರಾದ ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬದಲಾವಣೆ ಮಾಡೋ ಹಂತಕ್ಕೆ ತಲುಪಿದ್ದಾರೆ.
ಭಾರತದ ಸಂವಿಧಾನವನ್ನು ಇಡೀ ಜಗತ್ತು ಕೊಂಡಾಡಿ ಒಪ್ಪಿಕೊಂಡಿದೆ. ಇದನ್ನು ಬದಲಾವಣೆ ಮಾಡೋ ದುಷ್ಟ ಕೆಲಸಕ್ಕೆ ಕೈ ಹಾಕಿದ ಬಿಜೆಪಿಯವರ ಈ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಮತದಾರರರು ಜಾಗ್ರತರಾಗಬೇಕಾಗಿದೆ ಅಂತಾ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ದಲಿತರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅನುದಾನವನ್ನು ದಲಿತರಿಗೆ ಅಭಿವ್ರದ್ದಿಗೆ ಕೊಡದೇ ಬೇರೆ ಕಡೆ ವಿನಿಯೋಗ ಮಾಡೋ ಕೆಲಸವನ್ನು ಬಿಜೆಪಿ ಮಾಡ್ತಾ ಇರೋದು ಖಂಡನೀಯ ಎಂದ ಸೊರಕೆ, ಜನಪರ ಕೆಲಸ ಮಾಡುವ ಸೊರಕೆ ಬೇಕೇ ...ಇಲ್ಲವೇ ಉದ್ಯಮಿ ಬೇಕೇ ಎಂದು ಕಾಪುವಿನ ಜನತೆ ಈಗಾಗಲೇ ಜನತೆ ತೀರ್ಮಾನಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿ ಮಟ್ಟು ಭಾಗಕ್ಕೆ 18 ಲಕ್ಷ ರೂಪಾಯಿಯನ್ನು ಅನುದಾನವನ್ನು ಸೊರಕೆ ಒದಗಿಸಿಕೊಟ್ಟಿದ್ದಾರೆ . ಪಂಚಾಯತ್ ವತಿಯಿಂದ ಈ ಭಾಗಕ್ಕೆ ಬಹಳಷ್ಟು ಅನುದಾನ ಕೂಡಾ ಬಂದಿದೆ ಅಂತಾ ಮಟ್ಟು ಗ್ರಾಮಸ್ಥರಾದ ರಾಜಶೇಖರ್ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್, ದಯಾನಂದ ಬಂಗೇರ, ಕಿಶೋರ್ ಕುಮಾರ್, ಅಶೋಕ್, ಪ್ರಮೀಳಾ ಜತ್ತನ್, ವಿಕ್ರಮ್, ಸುಶೀಲ್ ಬೋಳಾರ್ , ಜಲಜಮ್ಮ , ಶಾಂತಾ,ಲಲಿತ, ಕುಸುಮ ಉಪಸ್ಥಿತರಿದ್ದರು.