ನೀಟ್ ಪರೀಕ್ಷೆ ಪ್ರವೇಶಕ್ಕೆ ನಿರಾಕರಿಸಿದ್ದರಿಂದ ಮನನೊಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೈದ ವಿದ್ಯಾರ್ಥಿನಿ
Friday, April 7, 2023
ತಮಿಳುನಾಡು: ನೀಟ್ ಪರೀಕ್ಷೆ ಪ್ರವೇಶಕ್ಕೆ ಕೋಚಿಂಗ್ ಕೇಂದ್ರವು ನಿರಾಕರಿಸಿದ್ದರಿಂದ ಮನನೊಂದು ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಅಬತರಣಪುರಂನ ಉತಿರಭಾರತಿ ಎಂಬವವರ ಪುತ್ರಿ ನಿಶಾ ಎಂಬಾಕೆ ವಂಡಲೂರು ರೈಲು ನಿಲ್ದಾಣದಲ್ಲಿ ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಶಾ ತನ್ನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿಶೇಷ ತರಗತಿಗೆ ಹಾಜರಾಗಬೇಕೆಂದು ಎಂದು ತನ್ನ ತಂದೆಗೆ ಹೇಳಿದ್ದು, ಅವಳು ವಂಡಲೂರು ರೈಲು ನಿಲ್ದಾಣಕ್ಕೆ ಹೋಗಿ ಸಂಜೆ 5.10 ರ ಸುಮಾರಿಗೆ ವೇಗವಾಗಿ ಬರುತ್ತಿದ್ದ ರೈಲಿನ ಮುಂಭಾಗಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.