ದುಬೈಯಲ್ಲಿ ಜೂನ್ 11ರಂದು ನಡೆಯಲಿರುವ 'ದುಬೈ ಯಕ್ಷೋತ್ಸವ-ವಿಶ್ವ ಪಟ್ಲ ಸಂಭ್ರಮ'ದ ಆಮಂತ್ರಣ ಪತ್ರ, ಟಿಕೆಟ್ ಬಿಡುಗಡೆ

ದುಬೈಯಲ್ಲಿ ಜೂನ್ 11ರಂದು ನಡೆಯಲಿರುವ 'ದುಬೈ ಯಕ್ಷೋತ್ಸವ-ವಿಶ್ವ ಪಟ್ಲ ಸಂಭ್ರಮ'ದ ಆಮಂತ್ರಣ ಪತ್ರ, ಟಿಕೆಟ್ ಬಿಡುಗಡೆ

ಪೋಟೋ: ಅಶೋಕ್ ಬೆಳ್ಮಣ್

ದುಬೈ: ದುಬೈನಲ್ಲಿ ನಡೆಯಲಿರುವ "ವಿಶ್ವ ಪಟ್ಲ ಸಂಭ್ರಮ-2023" ವಿಶ್ವ ಮಟ್ಟದಲ್ಲಿ ಪ್ರಖ್ಯಾತಗೊಳ್ಳಲಿದೆ. ವಿಶ್ವ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಯು.ಎ.ಇ. ತುಳು ಕನ್ನಡಿಗರ ಸಂಪೂರ್ಣ ಸಹಕಾರ ನೀಡಬೇಕು ಎಂದು ಪಟ್ಲ ಪೌಂಡೇಶನ್ ದುಬಾಯಿ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಮನವಿ ಮಾಡಿದ್ದಾರೆ.

ಜೂನ್ 11 ರಂದು ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ (ಇಂಡಿಯನ್ ಸ್ಕೂಲ್ ಕರಮ- ವೂದ್ ಮೆಹತಾ ) ನಡೆಯಲಿರುವ ಬಹು ನಿರೀಕ್ಷಿತ ವಿಶ್ವ ಪಟ್ಲ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವದ ಅಂಗವಾಗಿ ನಡೆಯಲಿರುವ ಅದ್ದೂರಿಯ ಯಕ್ಷಗಾನ ಕಾರ್ಯಕ್ರಮ ದಶಾವತಾರ ಇದರ ಆಮಂತ್ರಣ ಪತ್ರ ಮತ್ತು ಪ್ರವೇಶಪತ್ರದ ಬಿಡುಗಡೆ ಸಮಾರಂಭ ಇತ್ತೀಚೆಗೆ  ಹೋಟೇಲ್ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖ ಅಭ್ಯಾಗತರಾಗಿ ಭಾಗವಹಿಸಲಿರುವ ಪಟ್ಲ ಟ್ರಸ್ಟ್ ನ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮತ್ತು ಪ್ರಧಾನ ಸಂಚಾಲಕರಾದ ಹರೀಶ ಶೆಟ್ಟಿ ಐಕಳ, ಅಲ್ಲದೆ ಎಲ್ಲಾ ಪಟ್ಲ ಫೌಂಡೇಶನ್ ನ 40 ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.

ಕುಮಾರಿ ವೈಷ್ಣವಿ ಮನೋಹರ್ ಶೆಟ್ಟಿಗಾರ್ ಮತ್ತು ಕುಮಾರಿ ಪ್ರಾಪ್ತಿ ಜಯಾನಂದ ಪಕ್ಕಳರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿಶ್ವ ಪಟ್ಲ ಸಂಭ್ರಮ ಮತ್ತು ದಶಾವತಾರ ಯಕ್ಷಗಾನ ಪ್ರಸಂಗಗಳ ರೂಪುರೇ‍ಷೆಗಳನ್ನು ಸಭೆಗೆ ವಿವರಿಸಿದರು. ಜೊತೆಗೆ ಯಕ್ಷಧ್ರುವ ಪಟ್ಲ ಘಟಕದ ಸ್ಥಾಪಕ ಸತೀಶ ಶೆಟ್ಟಿ ಗಾನ ಸಾರಥ್ಯದಲ್ಲಿ ನಡೆಯಲಿರುವ ದಶಾವತಾರ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅತಿಥಿ ಕಲಾವಿದರಾದ, ಗಾನ ವಿಶಾರದ ರವಿಚಂದ್ರ ಕನ್ನಡಿಕಟ್ಟೆ, ಪ್ರಖ್ಯಾತ ಚೆಂಡೆ-ಮದ್ದಳೆ ವಾದಕರಾದ  ಪದ್ಮನಾಭ ಉಪಾಧ್ಯಾಯ ಮತ್ತು ಚೈತನ್ಯಕೃಷ್ಣ ಪದ್ಯಾಣ, ಹಾಗೂ ವರ್ಣವಸ್ತ್ರಾಲಂಕಾರ ತಜ್ಞರಾದ ಗಂಗಾಧರ ಶೆಟ್ಟಿಗಾರ್, ಕಿನ್ನಿಗೋಳಿ, ಶ್ರೀಯುತ ನಿತಿನ್ ಕುಂಪಲ ಮತ್ತು ಮನೋಜ್ ಶೆಟ್ಟಿಗಾರ್ ಹಳೆಯಂಗಡಿಯವರ ವಿವರಗಳನ್ನು ಸಭೆಗೆ ನೀಡಿದರು.. 

ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಗುರುಗಳೂ ಪ್ರಸಂಗ ನಿರ್ದೇಶಕರೂ ಆದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು, ದಶಾವತಾರದ ಕಥಾಹಂದರ- ಪ್ರದರ್ಶನ ವಿಶೇಷತೆಗಳ ಜೊತೆಗೆ ದಶಾವತಾರ ಪ್ರಸಂಗಗಳಿಗೆ ಆಯ್ದುಕೊಳ್ಳುವ ಮೂಲ ಪ್ರಸಂಗ ಕವಿಗಳ ವಿವರವನ್ನು ಸಭೆಯ ಮುಂಡಿಟ್ಟರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹರೀಶ್ ಶೇರಿಗಾರ್ (ಉದ್ಯಮಿ, ಕನ್ನಡ ಮತ್ತು ತುಳು ಚಿತ್ರ ನಿರ್ಮಾಪಕರು), ಹರೀಶ್ ಬಂಗೇರ (ಉದ್ಯಮಿ, ಪೋಷಕರು - ಕರ್ನಾಟಕ ಸಂಘ ದುಬೈ, ಕನ್ನಡ ಚಿತ್ರ ನಿರ್ಮಾಪಕರು), ಪುತ್ತಿಗೆ ವಾಸುದೇವ ಭಟ್ (ಗೌರವಾಧ್ಯಕ್ಷರು, ಯಕ್ಷ ಧ್ರುವ ಪಟ್ಲ ಫೌಂಡೇಶನ್ UAE), ನಾಗರಾಜ ರಾವ್ (ಆಡಳಿತ ನಿರ್ದೇಶಕರು -ಭೀಮ ಜುವೆಲ್ಲರಿ ದುಬೈ), ಬಿ. ಕೆ ಗಣೇಶ್ ರೈ (ಕಲಾತ್ಮಕ ನಿರ್ದೇಶಕರು), ಸುಧಾಕರ ರಾವ್ ಪೇಜಾವರ (ಉದ್ಯಮಿ, ಬ್ರಾಹ್ಮಣ ಸಮಾಜ ಯುಎಇ), ವರದರಾಜ್ ಶೆಟ್ಟಿಗಾರ್ (ಪದ್ಮಶಾಲಿ ಸಮುದಾಯ, ದುಬೈ), ಬಾಲಕೃಷ್ಣ ಸಾಲಿಯಾನ್ (ಸಂಘಟಕರು, ಮೊಗವೀರ ಸಮುದಾಯ ದುಬೈ), ಮನೋಹರ್ ತೋನ್ಸೆ  (ಲೇಖಕರು,ಬಿಲ್ಲವಾಸ್ ಅಬುಧಾಬಿ), ಸುಂದರ್ ಶೆಟ್ಟಿ (ಉದ್ಯಮಿ, ನಿಹಾಲ್ ರೆಸ್ಟೋರೆಂಟ್ ಅಬುಧಾಬಿ),ರಮಾನಂದ ಶೆಟ್ಟಿ ( ಉದ್ಯಮಿ‌ ಕಲಾ ಪೋಷಕರು), ಶಶಿಧರ್ ನಾಗರಾಜಪ್ಪ (ಕನ್ನಡ ಪಾಠ ಶಾಲೆ ದುಬೈ),ಆತ್ಮನಂದ ರೈ(ತುಳು ಚಿತ್ರ ನಿರ್ಮಾಪಕರು),ಪ್ರಭಾಕರ ಸುವರ್ಣ ಕರ್ನಿರೆ (ಅಧ್ಯಕ್ಷರು, ಬಿಲ್ಲವ ಫ್ಯಾಮಿಲಿ ದುಬೈ) ಮೊದಲಾದವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಎಲ್ಲಾ ಗಣ್ಯರು ಒಂದಾಗಿ, ಕಾರ್ಯಕ್ರಮದ ಆಮಂತ್ರಣ ಪತ್ರ ಮತ್ತು ಪ್ರವೇಶ ಬಿಡುಗಡೆಗೊಳಿಸಿ, ಸಮಸ್ತ ಯುಎಇಯಲ್ಲಿ ಯಕ್ಷಗಾನದ ಕಂಪನ್ನು ಮನೆ ಮನೆಗೂ ಪಸರಿಸಿ, ಕಿರಯರಿಂದ ಹಿರಿಯರವರೆಗೆ ಯಕ್ಷಗಾನ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಅರ್ವಾಚೀನ ಪ್ರಬುದ್ಧ ಯಕ್ಷಗಾನ ಕಲೆಯನ್ನು ಪಸರಿಸುತ್ತಿರುವ ಯಕ್ಷಗಾನ ಅಭ್ಯಾಸ ಕೇಂದ್ರದ ಈ ಕಾರ್ಯಕ್ರಮವನ್ನು ಬೆಂಬಲಿಸಬೇಕಾದ ಅಗತ್ಯವನ್ನು ವಿವರಿಸಿ, ನಮ್ಮ ಜೊತೆಗೆ ಅಖಂಡ ಯುಎಇಯ ಸರ್ವ ಕಲಾಭಿಮಾನಿಗಳ, ಕೌಟುಂಬಿಕ-ಸಾಂಸ್ಕೃತಿಕ ಸಂಘಟನೆಗಳು ಪೂರ್ಣ ಪ್ರಮಾಣದಿಂದ ಬೆಂಬಲಿಸಬೇಕೆಂದು ಕರೆ ನೀಡಿದರು.

ಯಕ್ಷಗಾನ ಅಭ್ಯಾಸ ಕೇಂದ್ರದ ಸದಸ್ಯ ರಾಜೇಶ್ ಕುತ್ತಾರು, ಕಾರ್ಯಕ್ರಮ ನಿರ್ವಹಿಸಿದರೆ, ಗಿರೀಶ್ ನಾರಾಯಣರು ಧನ್ಯವಾದ ಸಮರ್ಪಣೆ ಮಾಡಿದರು.

Ads on article

Advertise in articles 1

advertising articles 2

Advertise under the article