
ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ತಲೆ ನೋವಾದ ಬಂಡಾಯ ಅಭ್ಯರ್ಥಿಗಳು; ಹಿಂದೆ ಸರಿದವರು ಯಾರು...? ಕಣದಲ್ಲಿ ಉಳಿದವರು ಯಾರು...?
ಬೆಂಗಳೂರು: ಈ ಬಾರಿಯ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಗಿದಿದ್ದು ಕೊನೆಯ ದಿನ ಬಂಡಾಯ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಪ್ರಮುಖ ಪಕ್ಷಗಳು ಪ್ರಯತ್ನಿಸಿದ್ದು, ಹಲವು ಕಡೆ ಬಂಡಾಯ ಶಮನ ಮಾಡುವುದರಲ್ಲಿ ಯಶಸ್ಸು ಕಂಡರೆ ಇನ್ನೂ ಕೆಲವಡೆ ಬಂಡಾಯ ಅಭ್ಯರ್ಥಿಗಳು ಕಣದಲ್ಲಿಯೇ ಉಳಿದಿದ್ದಾರೆ. ಇದು ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಈ ಮಧ್ಯೆ ಮಂಗಳೂರು ಉಳ್ಳಾಲದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಾಲ ಇದ್ದಕ್ಕಿದ್ದಂತೆ ನಾಮಪತ್ರ ಹಿಂಪಡೆದಿದ್ದಾರೆ. ನಿನ್ನೆ ಒಟ್ಟು 502 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಈ ಮಧ್ಯೆ, ಜೆಡಿಎಸ್ ನಾಯಕ ಬೋಜೇಗೌಡ, ತಮ್ಮ ಬೆಂಬಲಿಗರಿಗೆ ಕಾಂಗ್ರೆಸ್ ಪರ ಕೆಲಸ ಮಾಡುವಂತೆ ಕರೆ ನೀಡಿರೋ ದೃಶ್ಯ ವೈರಲ್ ಆಗಿದೆ.
ಕಣದಲ್ಲಿರುವ `ಬಂಡಾಯ’ ಅಭ್ಯರ್ಥಿಗಳು...
ಮಾಡಾಳ್ ಮಲ್ಲಿಕಾರ್ಜುನ್ – ಚನ್ನಗಿರಿ: ಬಿಜೆಪಿ ಬಂಡಾಯ
ಅರುಣ್‍ಕುಮಾರ್ ಪುತ್ತಿಲ – ಪುತ್ತೂರು: ಬಿಜೆಪಿ ಬಂಡಾಯ
ಕೃಷ್ಣಯ್ಯ ಶೆಟ್ಟಿ – ಗಾಂಧಿನಗರ: ಬಿಜೆಪಿ ಬಂಡಾಯ
ಗೂಳಿಹಟ್ಟಿ ಶೇಖರ್ – ಹೊಸದುರ್ಗ: ಬಿಜೆಪಿ ಬಂಡಾಯ
ಅಖಂಡ ಶ್ರೀನಿವಾಸಮೂರ್ತಿ – ಪುಲಕೇಶಿನಗರ: ಕಾಂಗ್ರೆಸ್ ಬಂಡಾಯ
ಸೌಭಾಗ್ಯ ಬಸವರಾಜನ್ – ಚಿತ್ರದುರ್ಗ: ಕಾಂಗ್ರೆಸ್ ಬಂಡಾಯ
ವಿಜಯಾನಂದ – ಮಂಡ್ಯ: ಜೆಡಿಎಸ್ ಬಂಡಾಯ
ಕೊನೆಯ ಕ್ಷಣದಲ್ಲಿ ಮತ ಕಣದಿಂದ ಹಿಂದೆ ಸರಿದವರು...
ರಾಮಣ್ಣ ಲಮಾಣಿ – ಬಿಜೆಪಿ: ಶಿರಹಟ್ಟಿ
ಮಹದೇವಪ್ಪ ಯಾದವಾಡ, ಬಿಜೆಪಿ:ರಾಮದುರ್ಗಾ
ಶಾರದಾ ಶೆಟ್ಟಿ, ಕಾಂಗ್ರೆಸ್: ಕುಮಟಾ (ರಾಜಕೀಯ ನಿವೃತ್ತಿ)
ಬಸನಗೌಡ ಬಾದರ್ಲಿ, ಕಾಂಗ್ರೆಸ್: ಸಿಂಧನೂರು
ಕೃಷ್ಣೇಗೌಡ, ಕಾಂಗ್ರೆಸ್:ಅರಕಲಗೂಡು
ಗಂಗಾಂಬಿಕೆ, ಕಾಂಗ್ರೆಸ್: ಚಿಕ್ಕಪೇಟೆ
ರಾಜೇಶ್ ಗೌಡ, ಬಿಜೆಪಿ: ಕುಣಿಗಲ್
ಅಶೋಕ್ ಬಾಣಾವರ, ಜೆಡಿಎಸ್: ಅರಸಿಕೆರೆ